ಇತಿಹಾಸಕ್ಕೇ ಸವಾಲಾಯ್ತು ಭಾರತದ ಇತಿಹಾಸ: 120 ಅಡಿ ಆಳ ನೀರಿನಲ್ಲಿ 9,500ವರ್ಷಗಳ ಹಳೆಯ ಸಮಾಧಿ ಪತ್ತೆ..!

WhatsApp
Telegram
Facebook
Twitter
LinkedIn

ಗುಜರಾತ್‌: ಭಾರತ ದೇಶದ ಇತಿಹಾಸದ ಬಗ್ಗೆ ಭಾರೀ ವಿರೋಧಾಭಾಸಗಳಿವೆ. ಮೂಲ ಇತಿಹಾಸ ಬೇರೆಯೇ ಇದೆಯೆಂಬ ವಾದಗಳಿಗೆ ಹಲವಾ ಸಾಕ್ಷಿಗಳಿವೆ. ಇದಕ್ಕೆ ದಾಖಲೆಗಳು ಇವೆ. ಭಾರತೀಯರ ಮೂಲ ಇತಿಹಾಸ ಮರೆಮಾಡಿ ದಾಳಿಕೋರರನ್ನೇ ವಿಜೃಂಭಿಸಿದ ಇತಿಹಾಸದಲ್ಲಿ ತಿರುಳಿಲ್ಲ. ಮೂಲ ಇತಿಹಾಸ, ಭಾರತೀಯತೆ, ಸಂಸ್ಕೃತಿ, ಪರಂಪರೆ ಊಹೆಗೂ, ಕಲ್ಪನೆಗೂ ಮೀರಿದೆ ಅನ್ನೋ ವಾದಕ್ಕೆ ಹಲವು ಪುರಾವೆಗಳು ಸಿಗುತ್ತಲೇ ಇದೆ. ಇದೀಗ ಶ್ರೀ ಕೃಷ್ಣನ ದ್ವಾರಕ ನಗರ ಪಕ್ಕದಲ್ಲೇ ಇರುವ ಗಲ್ಫ್ ಆಫ್ ಕಂಭತ್‌ನಲ್ಲಿ ಸಿಕ್ಕಿರುವ ಮಹತ್ವದ ಸಾಕ್ಷಿ ವಿಶ್ವದ ಇತಿಹಾಸವನ್ನೇ ಬುಡಮೇಲು ಮಾಡಿದೆ. ಹೌದು ಗುಜರಾತ್‌ನಲ್ಲಿ ಮುಳುಗಿರುವ ದ್ವಾರಕ ನಗರದಿಂದ ಕೆಲ ದೂರದಲ್ಲಿರುವ ಗಲ್ಫ್ ಆಫ್ ಕಂಭತ್ ಪ್ರದೇಶದ ನೀರಿನ ಅಡಿಯಲ್ಲಿ ಸಿಕ್ಕಿರುವ ಮಾನವನ ಸಮಾಧಿ ಬರೋಬ್ಬರಿ 9,500 ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತಿದೆ.

ಗಲ್ಫ್ ಆಫ್ ಕಂಭತ್ ನೀರಿನ 120 ಅಡಿ ಆಳದಲ್ಲಿ ನಗರದಲ್ಲಿ ಮನುಷ್ಯನ ಸಮಾಧಿಯೊಂದು ಪತ್ತೆಯಾಗಿದೆ. ಈ ಸಮಾಧಿಯಲ್ಲಿ ಮನುಷ್ಯನ ಮೂಳೆಗಳು, ಕೆಲವು ಪಾತ್ರೆಗಳು, ಸಮಾಧಿ ಇಡಲು ಮಾಡಿರುವ ಬೆಡ್ ರೀತಿಯ ವಿನ್ಯಾಸ ಸೇರಿದಂತೆ ಕೆಲವು ವಸ್ತುಗಳು ಸಿಕ್ಕಿದೆ. ಮೂಳೆ ಹಾಗೂ ಪಾತ್ರಗಳ ಕಾರ್ಬನ್ ಡೇಟಿಂಗ್ ಮಾಡಲಾಗಿದೆ. ಈ ಫಲಿತಾಂಶ ಜಗತ್ತನ್ನೇ ಅಚ್ಚರಿಗೊಳಿಸಿದೆ. ಕಾರಣ ಈ ವಸ್ತು, ಮೂಳೆ ಕಾರ್ಬನ್ ಡೇಟಿಂಗ್ ವರ್ಷ ಬರೋಬ್ಬರಿ 9,500 ವರ್ಷ ಹಳೆಯದು. ಅಂದರೆ ಭಾರತದ ಇತಿಹಾಸವನ್ನು 9,500 ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತಿದೆ.

9,500 ವರ್ಷಗಳ ಹಿಂದೆ ಸತ್ತವರನ್ನು ಸುರಕ್ಷಿತವಾಗಿ ಸಮಾಧಿ ಮಾಡುವ ಪದ್ಧತಿ ಇತ್ತು ಅನ್ನೋದು ಮಾತ್ರವಲ್ಲ. ಅಷ್ಟು ವರ್ಷಗಳ ಹಿಂದೆ ಭಾರತೀಯ ಸಂಪ್ರದಾಯ, ಪದ್ಥತಿ ಕುರಿತು ಇದು ಬೆಳಕು ಚೆಲ್ಲುತ್ತದೆ. ಪಾತ್ರೆಗಳು ಈ ಸಮಾಧಿ ಜೊತೆ ಸಿಕ್ಕಿದೆ. ಅಂದರೆ ಭಾರತೀಯರು ಆಧುನಿಕ ಕಾಲದಲ್ಲಿ ಬಳಸುತ್ತಿದ್ದ ಪಾತ್ರೆ, ಪದ್ಥತಿಗಳನ್ನು ಅಂದು ಕೂಡ ಇತ್ತು. ಹೀಗಾಗಿ ಭಾರತೀಯ ಪರಂಪರೆಗೆ ಇದೀಗ 9,500 ವರ್ಷಗಳ ಇತಿಹಾಸವನ್ನು ಈ ಸಮಾಧಿ ಪುರಾವೆಯಾಗಿ ನೀಡುತ್ತಿದೆ.

ಈ ಸಮಾಧಿಯಿಂದ ಭಾರತದ ಇತಿಹಾಸ 9,500 ವರ್ಷಕ್ಕೆ ಸಮೀತಗೊಳ್ಳುವುದಿಲ್ಲ ಎಂದು ತಜ್ಞರು ಅಬಿಪ್ರಾಯಪಟ್ಟಿದ್ದಾರೆ. ಕಾರಣ ಒಂದು ನಾಗರೀಕತೆ ಹುಟ್ಟಿ ಬೆಳೆದು ಅಲ್ಲಿ ಪದ್ಧತಿ, ಸಂಸ್ಕೃತಿ, ಸಂಪ್ರದಾಯ ಗಟ್ಟಿಗೊಳ್ಳಲು ಸಾವಿರಾರು ವರ್ಷಗಳೇ ಹಿಡಿಯಲಿದೆ. ಹೀಗಾಗಿ ಸಮಾಧಿ ಮಾಡಿದ ವರ್ಷ 9,500 ಎಂದರೆ, ನಾಗರೀಕತೆ ಹುಟ್ಟಿಕೊಂಡ ವರ್ಷ ಮತ್ತಷ್ಟು ಹಿಂದಕ್ಕೆ ಹೋಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೈರೆಸಲ್ಯೂಶನ್ ಸೋನಾರ್ ಸ್ಕ್ಯಾನ್ ಬಳಸಿ ಈ ಸಮಾಧಿ ಆಕಾರ ಸೇರಿದಂತೆ ಇತರ ಮಾಹಿತಿಗಳನ್ನು ಪತ್ತೆ ಹಚ್ಚಲಾಗಿದೆ. ಮಾನವನ ಸಮಾಧಿಯನ್ನು ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಮಾಡಿರುವುದು ಇಲ್ಲಿ ಗಮನಿಸಬಹುದು. ಈ ಕುರಿತು ಅಧ್ಯಯನ ನಡೆಸಿರುವ ಭಾರತೀಯ ಪುರಾತತ್ವ ಇಲಾಖೆ ನ್ಯಾಷನ್ ಇನ್ಸಿಟಿಟ್ಯೂಟ್ ಒಶಿಯನ್ ಟೆಕ್ನಾಲಜಿ ಮಾಜಿ ಮುಖ್ಯಸ್ಥ ಬದ್ರಿನಾರಾಯಣ ಕೆಲ ಮಹತ್ವದ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ನೀರಿನಲ್ಲಿ ಮುಳುಗಿರುವ ಈ ನಗರ ಭಾರತೀಯ ಸಂಸ್ಕೃತಿಯ ತಾಯಿ ಎಂದು ಬಣ್ಣಿಸಿದ್ದಾರೆ. ಇಂಡಸ್ ವ್ಯಾಲಿ ನಾಗರೀಕತೆ ಹುಟ್ಟು ಹಾಗೂ ಬೆಳವಣಿಗೆ ಕುರುಹು ಇದು ಎಂದಿದ್ದಾರೆ. ಈ ಸಮಾಧಿ ಭಾರತೀಯರ ನಂಬಿಕೆ, ಆಚಾರ ವಿಚಾರಗಳ ಮೇಲೆ ಬೆಳೆಕು ಚೆಲ್ಲುತ್ತಿದೆ ಎಂದು ಬದ್ರಿನಾರಾಯಣ ಹೇಳಿದ್ದಾರೆ.

ಈ ಸಮಾಧಿ ಮಾಡಲು ಏಕಶಿಳೆ ಬಳಸಲಾಗಿದೆ. ಇನ್ನು ಮೃತದೇಹ ಕೆಡದಂತೆ ಇಡುವ ಕಲೆ ಅಂದೆ ತಿಳಿದಿತ್ತು. ಹೀಗಾಗಿ 9,500 ವರ್ಷ ಕಳೆದರೂ ಮೂಳೆ, ಪಾತ್ರೆಗಳು ಸಿಕ್ಕಿದೆ. ಆದರೆ ಕೆಲ ಪುರಾತತ್ವ ಸಂಶೋಧಕರು ಈ ಸಿಕ್ಕ ವಸ್ತುಗಳು ಕಾರ್ಬನ್ ಡೇಟಿಂಗ್ ಮಾಡಿ ಇತಿಹಾಸ ಹೇಳಲು ಸಾಕಗಲ್ಲ ಅನ್ನೋ ವಾದವನ್ನು ಮುಂದಿಟ್ಟಿದ್ದಾರೆ.

BC Suddi   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon