ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಪಕ್ಕ ಮುರಿದ ಹಕ್ಕಿಯಂತೆ, ಸಾಸಿವೆಯನೊಕ್ಕಿದ ಎತ್ತಿನಂತೆ,
ಬೆಳಗ ಕಂಡು ಮೈಮರೆದ ಹುಲ್ಲೆಯಂತೆ,
ಅಳಿಕುಲಕ್ಕೆ ವಿಷವಾದ ಸಂಪಿಗೆಯ ಪುಷ್ಪದಂತೆ,
ಎನ್ನ ತನು ಮನ ಕುಲಕ್ಕೆ
ನಿಮ್ಮ ನೆನಹೆಂಬ ಜ್ವಾಲೆ ತಾಗಿ ಸತ್ತೆನಯ್ಯಾ ಸಾಯದಂತೆ.
ಹುಲ್ಲಸರವಿಯಲ್ಲಿ ಕಟ್ಟಿದ ಕಿಚ್ಚಿನಂತೆ, ಬೇಯದಂತೆ ಬೆಂದೆನಾಗಿನಿಜಗುರು ಭೋಗೇಶ್ವರಾ, ನಿಮ್ಮ ಸಂಗಸುಖವದೇಕೊ ?
-ಭೋಗಣ್ಣ






























