ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ರಸವಾದಂಗಳ ಕಲಿತಲ್ಲಿ ಲೋಹಸಿದ್ಧಿಯಲ್ಲದೆ
ರಸಸಿದ್ಧಿಯಾದುದಿಲ್ಲ.
ನಾನಾ ಕಲ್ಪಯೋಗ ಅದೃಶ್ಯಕರಣಂಗಳ ಕಲಿತಲ್ಲಿ
ಕಾಯಸಿದ್ಧಿಯಲ್ಲದೆ ಆತ್ಮಸಿದ್ಧಿಯಾದುದುಂಟೆ?
ನಾನಾ ವಾಗ್ವಾದಂಗಳಿಂದ ಹೋರಿ
ಮಾತಿನ ಮಾಲೆಯಾಯಿತಲ್ಲದೆ
ಆತ್ಮನಿಹಿತವಾದುದಿಲ್ಲ.
ನೀ ನಾನೆಂದಲ್ಲಿ ನೀನು ನಾನಾದೆಯಲ್ಲದೆ
ನಾನು ನೀನಾದುದಿಲ್ಲ.
ಗೋರಕ್ಷಪಾಲಕ ಮಹಾಪ್ರಭು
ಸಿದ್ಧಸೋಮನಾಥ ಲಿಂಗವಾದೆಯಲ್ಲದೆಲೀಯವಾಗಿ ಆ ಲಿಂಗನೇ ಆದುದಿಲ್ಲ.
-ಗೋರಕ್ಷ / ಗೋರಖನಾಥ

































