ಜಪಾನ್: ವಿಜ್ಞಾನಿಗಳು ಪರೀಕ್ಷೆ ನಡೆಸುತ್ತಿದ್ದ ವೇಳೆ ರಾಕೆಟ್ ಇಂಜಿನ್ ಸ್ಫೋಟಗೊಂಡಿರುವ ಘಟನೆ ಜಪಾನ್ ನಲ್ಲಿ ನಡೆದಿದೆ. ಜಪಾನ್‌ನ ಎಪ್ಸಿಲಾನ್ ಎಸ್ ರಾಕೆಟ್ ಎಂಜಿನ್ ನ ಎರಡನೇ ಹಂತದ ಪರೀಕ್ಷೆಯಲ್ಲಿ ಸುಮಾರು 57 ಸೆಕೆಂಡುಗಳಲ್ಲಿ ಸ್ಫೋಟಗೊಂಡಿದೆ ಎಂದು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇಂಜಿನ್ ಸ್ಫೋಟಗೊಂಡ ನಂತರ ಪರೀಕ್ಷಾ ಕೇಂದ್ರವು ಬೆಂಕಿ ಮತ್ತು ಹೊಗೆಯಿಂದ ಆವೃತವಾಗಿರುವ ದೃಶ್ಯಗಳು ದೊರೆತಿದೆ. ಘಟನೆಯಿಂದ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.