ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಡಂಬಕದ ಪೂಜೆ ಹೋಹ ಹೊತ್ತಿನ ಕೇಡು.
ಆಡಂಬರದ ಪೂಜೆ ತಾಮ್ರದ ಮೇಲಣ
ಸುವರ್ಣದ ಛಾಯೆ.
ಇಂತೀ ಪೂಜೆಗೆ ಹೂ ಸೊಪ್ಪನಿಕ್ಕಿ
ಮನ ಹೂಣದೆ ಮಾಡುವ ಪೂಜೆ
ಬೇರು ನನೆಯದೆ ನೀರು,
ಆಯವಿಲ್ಲದ ಗಾಯ,
ಭಾವವಿಲ್ಲದ ಘಟ ವಾಯವೆಂದನಾರಾಯಣಪ್ರಿಯ ರಾಮನಾಥಾ.
-ಗುಪ್ತ ಮಂಚಣ್ಣ































