ಬೊಗೊಟ್ : ಕೊಲಂಬಿಯಾದ ಅಮೆಜಾನ್ನಲ್ಲಿ ಎರಡು ವಾರಗಳ ಹಿಂದೆ ಸಂಭವಿಸಿದ ವಿಮಾನ ಅಪಘಾತದ ನಂತರ 11 ತಿಂಗಳ ಮಗು ಸೇರಿದಂತೆ ನಾಲ್ಕು ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಅಧ್ಯಕ್ಷ ಗುಸ್ಟಾವೊ ಪೆಟ್ರೋ ಹೇಳಿದ್ದಾರೆ. ಟ್ವಿಟರ್ನಲ್ಲಿ ಈ ಸುದ್ದಿ ಹಂಚಿಕೊಂಡಿರುವ ಪೆಟ್ರೋ, ಇದು ದೇಶಕ್ಕೆ ಸಂತೋಷವನ್ನುಂಟು ಮಾಡಿದೆ. ಸೈನಿಕರು ಕಠಿಣವಾಗಿ ಹುಡುಕಾಟ ಪ್ರಯತ್ನ ನಡೆಸಿದ ನಂತರ ಮಕ್ಕಳನ್ನು ಪತ್ತೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಮೇ 1 ರಂದು ಅಪಘಾತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಮಕ್ಕಳನ್ನು ಹುಡುಕಲು 100 ಕ್ಕೂ ಹೆಚ್ಚು ಸೈನಿಕರು ಮತ್ತು ಸ್ನಿಫರ್ ಡಾಗ್ಗಳನ್ನು ಅಧಿಕಾರಿಗಳು ನಿಯೋಜಿಸಿದ್ದರು. ವಿಮಾನ ಅಪಘಾತದಲ್ಲಿ ಮೂವರು ಹದಿಹರೆಯದವರು ಸಾವನ್ನಪ್ಪಿದ್ದರು. ಅಪಘಾತದ ನಂತರ 11 ತಿಂಗಳ ಮಗುವಿನ ಜೊತೆಗೆ 13, 9 ಮತ್ತು 4 ವರ್ಷದ ಮಕ್ಕಳು ದಕ್ಷಿಣ ಕ್ಯಾಕ್ವೆಟಾ ವಿಭಾಗದಲ್ಲಿ ಕಾಡಿನಲ್ಲಿದ್ದರು. ನಂತರ ಶಸಸ್ತ್ರ ಪಡೆಗಳು ಶೋಧ ಕಾರ್ಯ ನಡೆಸಿದಾಗ ಅಪ್ರಾಪ್ತ ವಯಸ್ಸಿನ ಮಕ್ಕಳು ಬದುಕುಳಿದಿರುವುದು ದೃಢಪಟ್ಟಿದೆ . ಸೋಮವಾರ ಮತ್ತು ಮಂಗಳವಾರ ಪೈಲಟ್ ಹಾಗೂ ಇಬ್ಬರು ವಯಸ್ಕರ ಮೃತದೇಹವನ್ನು ಸೈನಿಕರು ಪತ್ತೆ ಮಾಡಿದ್ದರು.
[vc_row][vc_column]
BREAKING NEWS
- ‘ಕಟೀಲ್, ಬೊಮ್ಮಾಯಿ ಅವರೇ ನಿಮ್ಮ ಮನೆಗೂ ಕರೆಂಟ್ ಫ್ರೀ’ ಎಂದ ಕಾಂಗ್ರೆಸ್!
- 2022-23ನೇ ಸಾಲಿನಲ್ಲಿ ಪದವಿ ಪಡೆದ ನಿರುದ್ಯೋಗಿ ಯುವಕ- ಯುವತಿಯರಿಗೆ ‘ಯುವನಿಧಿ’ ಭಾಗ್ಯ ಜಾರಿ ಮಾಡಿದ ಸಿದ್ದು ಸರ್ಕಾರ
- ಮಂಗಳೂರು: ನಗರಾಭಿವೃದ್ದಿ ಪ್ರಾಧಿಕಾರದ ಸಿಬ್ಬಂದಿ ಆತ್ಮಹತ್ಯೆ
- ಗೃಹಲಕ್ಷ್ಮಿ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ? ಬೇಕಾದ ದಾಖಲೆಗಳೇನು? ಕೊನೆ ದಿನಾಂಕದ ಮಾಹಿತಿ
- ಉಚಿತ ಬಸ್ ಯೋಜನೆ – ಜೂನ್ 11 ರಿಂದ ಉಚಿತ ಬಸ್ ಪ್ರಯಾಣ
- ಗ್ಯಾರೆಂಟ್ ಜಾರಿ: ಜು.1ರಿಂದ 200 ಯುನಿಟ್ ಉಚಿತ ವಿದ್ಯುತ್, ಎಪಿಎಲ್ ಗೂ ಗೃಹಲಕ್ಷ್ಮಿ
- ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಪ್ರಕರಣ: ಅಪರಾಧಿ ಆದಿತ್ಯ ರಾವ್ ನಿಂದ ಜೈಲಿನಲ್ಲಿ ದಾಂಧಲೆ..!
- ಈ ಆರ್ಥಿಕ ವರ್ಷದಲ್ಲಿ ಎಲ್ಲಾ ಐದೂ ಗ್ಯಾರಂಟಿ ಜಾರಿ: ಷರತ್ತು ಅನ್ವಯ- ಸಿಎಂ
- ಕಡಬ: ಮನೆ ಮೇಲ್ಛಾವಣಿಯಿಂದ ಬಿದ್ದು ಕಾರ್ಮಿಕ ಮೃತ್ಯು
- ಡಿಕೆಶಿ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಸಿಬಿಐ ತನಿಖೆ ತಡೆಯಾಜ್ಞೆ ವಿಸ್ತರಣೆ