36 ನೇ ಕಿರಿಯ ವಯಸ್ಸಿನಲ್ಲಿ ಕೇಂದ್ರ ಸಚಿವರಾದ ಟಿಡಿಪಿಯ ರಾಮ್ ಮೋಹನ್ ನಾಯ್ಡು

ನವದೆಹಲಿ: ಟಿಡಿಪಿ ಸಂಸದ ಕಿಂಜರಾಪು ರಾಮಮೋಹನ್ ನಾಯ್ಡು ಅತಿ ಕಿರಿಯ ವಯಸ್ಸಿನ ಸಚಿವರಾಗಿದ್ದರೆ. ಈ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಮೋದಿ 3.0 ಸರ್ಕಾರದಲ್ಲಿ ಅವರು ರಾಷ್ಟ್ರಪತಿಗಳಿಂದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಮಮೋಹನ್ ನಾಯ್ಡು ಅವರಿಗೆ ಈಗ ವಯಸ್ಸು ಕೇವಲ 36 ವರ್ಷ. ಇಷ್ಟು ಕಿರಿಯ ವಯಸ್ಸಿನಲ್ಲಿ ಕೇಂದ್ರ ಮಂತ್ರಿಯಾದ ದಾಖಲೆ ಅವರದ್ದಾಗಿದೆ. ನರೇಂದ್ರ ಮೋದಿ ಸತತ ಮೂರು ಬಾರಿ ಪ್ರಧಾನಿ ಆದಂತೆ ರಾಮಮೋಹನ್ ನಾಯ್ಡು ಸತತ ಮೂರನೇ ಬಾರಿ ಸಂಸದರಾಗಿದ್ದಾರೆ.

2014ರಲ್ಲಿ ಅವರು 26ನೇ ವಯಸ್ಸಿಗೆ ಸಂಸದರಾಗಿದ್ದರು. ಎರಡನೇ ಅತ್ಯಂತ ಕಿರಿಯ ವಯಸ್ಸಿನ ಸಂಸದರೆಂಬ ದಾಖಲೆಯನ್ನು ಅವರು ಬರೆದಿದ್ದರು. ಈಗ ಅತ್ಯಂತ ಕಿರಿಯ ವಯಸ್ಸಿನ ಕೇಂದ್ರ ಮಂತ್ರಿ ಎಂಬ ದಾಖಲೆ ಅವರದ್ದಾಗಿದೆ. ಅವರಿಗೆ ಈಗ ಕ್ಯಾಬಿನೆಟ್ ದರ್ಜೆಯಲ್ಲಿ ಸಚಿವ ಸ್ಥಾನವೇ ಸಿಕ್ಕಿದೆ.

Advertisement

ಆಂಧ್ರದ ಶ್ರೀಕಾಕುಲಂ ಕ್ಷೇತ್ರದಿಂದ ಟಿಡಿಪಿ ಟಿಕೆಟ್​ನಲ್ಲಿ ಸತತವಾಗಿ ಮೂರನೇ ಬಾರಿ ಗೆದ್ದಿರುವ ರಾಮಮೋಹನ್ ರೆಡ್ಡಿ ಅವರು ಮಾಜಿ ಕೇಂದ್ರ ಸಚಿವ ಕೆ ಯರನ್ ನಾಯ್ಡು ಅವರ ಮಗ. ಕುತೂಹಲ ಎಂದರೆ ಯರನ್ ನಾಯ್ಡು ಕೂಡ ಅತ್ಯಂತ ಕಿರಿಯ ವಯಸ್ಸಿನ ಕ್ಯಾಬಿನೆಟ್ ಮಿನಿಸ್ಟರ್ ಎಂಬ ದಾಖಲೆಯನ್ನು 1996ರಲ್ಲಿ ಸ್ಥಾಪಿಸಿದ್ದರು.

2012ರಲ್ಲಿ ಯರನ್ ನಾಯ್ಡು ದುರದೃಷ್ಟವಶಾತ್ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ಮರಣವಪ್ಪಿದ್ದರು. ಅದಾದ ಬಳಿಕ ರಾಮಮೋಹನ್ ನಾಯ್ಡು ರಾಜಕೀಯಕ್ಕೆ ಬರಬೇಕಾಯಿತು.ಅಪ್ಪ ನ ನಿಧನದ ಬಳಿಕ ಎರಡು ವರ್ಷದಲ್ಲೇ ರಾಜಕೀಯಕ್ಕೆ ಬಂದ ರಾಮಮೋಹನ್ ರೆಡ್ಡಿ 2014ರಲ್ಲಿ 26ರ ಹರೆಯದಲ್ಲಿ ಚುನಾವಣೆಯಲ್ಲಿ ಗೆದ್ದು ಸಂಸದರಾದರು.

ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ ಸಂದರ್ಭದಲ್ಲಿ ಆಂಧ್ರದಲ್ಲಿ ಸಂಘಟನೆ ಕಟ್ಟಿ ಜನ ಬೆಂಬಲವನ್ನು ಟಿಡಿಪಿ ಪರವಾಗಿ ತಿರುಗಿಸಲು ಶ್ರಮಿಸಿದವರಲ್ಲಿ ರಾಮಮೋಹನ್ ನಾಯ್ಡು ಇದ್ದಾರೆ. ಚಂದ್ರಬಾಬು ನಾಯ್ಡು ಅವರ ಮಗ ನಾರ ಲೋಕೇಶ್ ಜೊತೆ ಸೇರಿ ಪಕ್ಷ ಸಂಘಟನೆಯ ಕಾರ್ಯದಲ್ಲಿ ರಾಮಮೋಹನ್ ನಾಯ್ಡು ತೋರಿದ ಕೆಲಸ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.2020ರಲ್ಲಿ ಸರ್ಕಾರದಿಂದ ಸಂಸದ ರತ್ನ ಪ್ರಶಸ್ತಿ ಕೂಡ ಲಭಿಸಿತ್ತು.

 

Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement