ದೆಹಲಿ: 4 ಅಂತಸ್ತಿನ ವಿವೇಕ್ ವಿಹಾರ್ನಲ್ಲಿ ದುರಂತವೊಂದು ಸಂಭವಿಸಿದ್ದು ಕಟ್ಟಡದಲ್ಲಿ ಎಸಿ ಘಟಕ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡು 9 ಜನರು ಸಾವನ್ನಪ್ಪಿದ್ದಾರೆ.
ಇತರ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳದವರು 10 ಜನರನ್ನು ರಕ್ಷಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳನ್ನು ನಿಯೋಜಿಸಲಾಗಿದ್ದು, ಬೆಂಕಿಯನ್ನು ನಂದಿಸುವ ಪ್ರಯತ್ನಗಳು ನಡೆಯುತ್ತಿವೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗುತ್ತಿದೆ.
































