ದಾವಣಗೆರೆ: ಬಿ.ವಿ.ಎ ಪದವಿ ಪಡೆಯಲು  ಅರ್ಜಿ ಆಹ್ವಾನ

WhatsApp
Telegram
Facebook
Twitter
LinkedIn

 

    ದಾವಣಗೆರೆ : ಪ್ರಸಕ್ತ ಸಾಲಿನ ದೃಶ್ಯಕಲಾ ಮಹಾವಿದ್ಯಾಲಯದ ಬಿ.ವಿ.ಎ ಪದವಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜುಲೈ 15 ಕೊನೆಯದಿನವಾಗಿರುತ್ತದೆ. ಬಿ.ಎ.ಎ ಫೌಂಡೇಶನ್ (1 ವರ್ಷ-2 ಸೆಮಿಸ್ಟರ್) ತರಗತಿ ಪ್ರವೇಶಕ್ಕೆ 10+2 ಅಥವಾ ತತ್ಸಮಾನ ಶಿಕ್ಷಣ ಉತ್ತೀರ್ಣವಾಗಿರುವುದು ಕಡ್ಡಾಯ. ಸ್ನಾತಕ ಪದವಿ ಶಿಕ್ಷಣ 3 ವರ್ಷ-6 ಸೆಮಿಸ್ಟರ್ ಒಟ್ಟು 4 ವರ್ಷಗಳು ವರ್ಷದ ಫೌಂಡೇಶನ್ ನಂತರ ಬಿ.ವಿ.ಎ ಪೇಂಟಿಂಗ್, ಬಿ.ವಿ.ಎ ಅನ್ವಯಿಕ ಕಲಾ, ಬಿ.ವಿಎ ಶಿಲ್ಪಕಲಾ, ಬಿ.ವಿ.ಎ ಆನಿಮೇಶನ್ ವಿಭಾಗಗಳಿದ್ದು ವಿದ್ಯಾರ್ಥಿಗಳು ಈ ವಿಭಾಗಗಳಲ್ಲಿ ಯಾವುದಾದರೂ ಒಂದು ವಿಭಾಗ 8 ಸೆಮಿಸ್ಟರ್‍ಗಳಾಗಿರುತ್ತವೆ. 1 ಆಯ್ದುಕೊಂಡು ಬಿವಿಎ ಸ್ನಾತಕ ಪದವಿಯನ್ನು ಪಡೆಯುವ ಅವಕಾಶ ಇದೆ.

ಬಿ.ವಿ.ಎ ಸ್ನಾತಕ ಪದವಿ ಪಡೆದ ವಿದ್ಯಾರ್ಥಿಗಳಿಗೆ ಎಂ.ವಿ.ಎ ಪೇಂಟಿಂಗ್ ಹಾಗೂ ಎಂ.ವಿ.ಎ ಅನ್ವಯಿಕ ಕಲಾ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ (2 ವರ್ಷ – 4 ಸೆಮಿಸ್ಟರ್) ಅಧ್ಯಯನ ಮಾಡುವ ಅವಕಾಶ ಇದೆ. ಅಲ್ಲದೆ ಸ್ನಾತಕೋತ್ತರ ಪದವಿ ನಂತರ ಪಿಎಚ್‍ಡಿ ಪಡೆಯಲು ಅವಕಾಶವಿದೆ. ಅರ್ಜಿಯನ್ನು ಪ್ರಾಂಶುಪಾಲರ ಕಚೇರಿ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯ, ಕಲಾಗಂಗೋತ್ರಿ, ವಿದ್ಯಾನಗರ ಮುಖ್ಯ ರಸ್ತೆ, ದಾವಣಗೆರೆ 577004 ಇಲ್ಲಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ: ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಅಧಿಕೃತ ವೆಬ್‍ಸೈಟ್ https://davangereuniversity.ac.in/fine-arts/  ನ್ನು ವೀಕ್ಷಿಸಬಹುದು. ಅಥವಾ ಮೊ.ಸಂ: 9448414483, 9986687098, 08192-220075 ಸಂಪರ್ಕಿಸಬಹುದೆಂದು ಪ್ರಾಂಶುಪಾಲರು ತಿಳಿಸಿದ್ದಾರೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon