ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಸಕಲ ಗಂಧಕ್ಕೆ ವಾಯುವೆ ಬೀಜ, ಸಕಲ ಉತ್ಪತ್ಯಕ್ಕೆ ಅಪ್ಪುವೆ ಬೀಜ.
ಸಕಲ ಪ್ರಕೃತಿಗೆ ಜೀವವೆ ಬೀಜ.
ಇಂತೀ ಭೇದವನರಿತಲ್ಲಿ,
ಆತ್ಮನ ವಿವರ ಹೆರೆಹಿಂಗಿದಲ್ಲದೆ, ನಿಜತತ್ವ ಪರಮನಲ್ಲ.
ಪರಮ ಪರತತ್ವವ ಕೂಡಿ ಬೆರಸಿದಲ್ಲಿ,ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
-ಶಿವಲೆಂಕ ಮಂಚಣ್ಣ































