ತೆಲುಗಿನ ಹಿರಿಯ ನಟ ಚಂದ್ರಮೋಹನ್ ನಿಧನ..!

WhatsApp
Telegram
Facebook
Twitter
LinkedIn

ಹೈದರಬಾದ್ : ತೆಲುಗಿನ ಹಿರಿಯ ನಟ, ನಾಯಕ ಚಂದ್ರಮೋಹನ್ ಇಂದು ನಿಧನರಾಗಿದ್ದಾರೆ. ಅವರು ಹೃದಯಾಘಾತದಿಂದ ಹೈದರಾಬಾದ್ ಅಪೋಲೋ ಆಸ್ಪತ್ರೆಯಲ್ಲಿ ಬೆಳಿಗ್ಗೆ 9.45 ಕ್ಕೆ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಜಲಂಧರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಚಂದ್ರಮೋಹನ್ ಅವರ ಅಂತ್ಯಕ್ರಿಯೆ ಸೋಮವಾರ ಹೈದರಾಬಾದ್‌ನಲ್ಲಿ ನಡೆಯಲಿದೆ.

ವಿವಿಧ ಪಾತ್ರಗಳ ಮೂಲಕ ತೆರೆ ಮೇಲೆ ಜನರನ್ನು ರಂಜಿಸಿದ್ದ ಚಂದ್ರಮೋಹನ್‌ ಅವರು ನಾಯಕನ ಪಾತ್ರದ ಜತೆಗೆ ಹಾಸ್ಯ ಹಾಗೂ ಪೋಷಕ ಪಾತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದರು. 1943ರ ಮೇ 23 ರಂದು ಅವಿಭಜಿತ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಪಮಿಡಿಮುಕ್ಕಲ ಎಂಬಲ್ಲಿ ಜನಿಸಿದ್ದ ಅವರ ಹಿಂದಿನ ಹೆಸರು ಮಲ್ಲಪ್ಪಲ್ಲಿ ಚಂದ್ರಶೇಖರ ರಾವ್. 1996ರಲ್ಲಿ ‘ರಂಗುಲಂ ರತ್ನಂ’ ಚಿತ್ರದ ಮೂಲಕ ಸಿನಿಮಾ ರಂಗವನ್ನು ಪ್ರವೇಶಿಸಿದ ಅವರು, ಬಳಿಕ ಹಲವು ಹಿಟ್‌ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ತಮಿಳು ಸಿನಿಮಾಗಳಲ್ಲಿ ಕೂಡ ನಟಿಸಿದ್ದ ಅವರು, 2017ರಲ್ಲಿ ಕೊನೆಯ ಬಾರಿಗೆ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅವರ ನಿಧನಕ್ಕೆ ಚಿತ್ರರಂಗದ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon