6 ಮಂದಿ ಉಗ್ರರ ಬಂಧಿಸಿದ ಭದ್ರತಾ ಪಡೆ; ಶಸ್ತ್ರಾಸ್ತ್ರ ವಶಕ್ಕೆ

ಚುರಾಚಂದಪುರ : ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆ ಕಾಂಗ್ರೇಪಕ್ ಕಮ್ಯುನಿಸ್ಟ್ ಪಾರ್ಟಿಯ (ಪೀಪಲ್ಸ್ ವಾರ್ ಗ್ರೂಪ್) ಆರು ಉಗ್ರರನ್ನು ಬಂಧಿಸಲಾಗಿದ್ದು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಬಂಧಿತರು ಅಕ್ರಮ ಶಸ್ತ್ರಾಸ್ತ್ರ ವಹಿವಾಟು ಮತ್ತು ಸಾರ್ವಜನಿಕರು ಹಾಗೂ ಸರ್ಕಾರಿ ಕಚೇರಿಗಳಿಂದಲೂ ಸುಲಿಗೆ ಮಾಡುತ್ತಿದ್ದರು. ಬಂಧಿತರಿಂದ 4 ಕಾರು, 2 ಬೈಕ್ ಮತ್ತು ಅನೇಕ ಮೊಬೈಲ್ ಫೋನ್ ಸೇರಿದಂತೆ ಸುಮಾರು 4 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚುರಾಚಂದಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಬಂದೂಕುಗಳು, ಎರಡು ಎಲೆಕ್ನಿಕ್ ಡಿಟೋನೇಟರ್‌ಗಳು, ಮ್ಯಾಗಜೀನ್ ಜತೆಗೆ 9 ಎಂಎಂ ಪಿಸ್ತೂಲ್ ಹಾಗೂ ಮೂರು ಹ್ಯಾಂಡ್ ಗ್ರೆನೇಡ್‌ಗಳನ್ನೂ ಪತ್ತೆಹಚ್ಚಲಾಗಿದೆ. ಲಾಮ್ಹಾಂಗ್ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಶೋಧ ಕಾರ್ಯಾಚರಣೆ ವೇಳೆ 303 ರೈಫಲ್, ಸಿಂಗಲ್ ಬ್ಯಾರೆಲ್ ಬಂದೂಕು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement