ಮುಂಬೈ: ಬಾಲಿವುಡ್ ನಟಿ ಪೂನಂ ಧಿಲ್ಲೋನ್ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರದ ನೆಕ್ಲೇಸ್ ಕಳ್ಳತನವಾಗಿರುವ ಘಟನೆ ನಡೆದಿದೆ.
ಮನೆಯಲ್ಲಿ ಕೆಲಸದವನೇ ಡೈಮಂಡ್ ನೆಕ್ಲೇಸ್ ಜೊತೆಗೆ 35,000 ರೂ. ನಗದು ಹಣ ಹಾಗೂ ಕೆಲವು ಡಾಲರ್ಗಳನ್ನೂ ಕದ್ದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ 37 ವರ್ಷದ ಸಮೀರ್ ಅನ್ಸಾರಿ ಎಂದು ಗುರುತಿಸಲಾಗಿದೆ, ಈತ ಫ್ಲಾಟ್ಗೆ ಪೇಯಿಂಟಿಂಗ್ ಕೆಲಸಕ್ಕೆ ಬಂದಿದ್ದ. ಕಳೆದ ಡಿಸೆಂಬರ್ 28ರಿಂದ ಇದೇ ಜನವರಿ 5ರ ವರೆಗೆ ಕೆಲಸ ಮಾಡುತ್ತಿದ್ದ. ಈ ವೇಳೆ ಆರೋಪಿ ಮನೆಯ ಕಬೋರ್ಡ್ವೊಂದರಲ್ಲಿಟ್ಟಿದ್ದ ನೆಕ್ಲೇಸ್, ನಗದು, ಡಾಲರ್ಗಳನ್ನು ಕದ್ದೊಯ್ದಿದ್ದಾನೆ ಎನ್ನಲಾಗಿದೆ.
ಆರೋಪಿ ಅನ್ಸಾರಿ ಕದ್ದ ಹಣದಲ್ಲಿ ಸ್ವಲ್ಪ ಹಣವನ್ನು ಪಾರ್ಟಿಗೆ ಖರ್ಚು ಮಾಡಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಪೂನಂ ಧಿಲ್ಲೋನ್ ಈ ಹಿಂದೆ ʻಪಥರ್ ಕೆ ಇನ್ಸಾನ್ʼ, ʻಜೈ ಶಿವ ಶಂಕರ್ʼ, ʻರಾಮಯ್ಯ ವಸ್ತವಯ್ಯʼ, ʻಬಟ್ವಾರಾʼ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಕೊನೆಯದ್ದಾಗಿ ʻಜೈ ಮಮ್ಮಿ ಡಿʼ ಚಿತ್ರದಲ್ಲಿ ನಟಿಸಿದ್ದರು