ಬೆಂಗಳೂರು: ಮೊಬೈಲ್‌ ಫೋನ್‌ಗಾಗಿ ತಂಗಿಯ ಕಣ್ಣೆದುರೇ ಆತ್ಮಹತ್ಯೆ ಮಾಡಿಕೊಂಡ 13 ವರ್ಷದ ಬಾಲಕ

WhatsApp
Telegram
Facebook
Twitter
LinkedIn

ಬೆಂಗಳೂರು: ಅದಿನ್ನೂ ಆಟ ಆಡೋ ವಯಸ್ಸು, ಆಟಕ್ಕಾಗಿ ಹಠ ಮಾಡೋ ಮನಸ್ಥಿತಿ. ಅಪ್ಪ ಅಮ್ಮನ ಮೇಲೆ ಕೋಪ ಬರೋ ಪರಿಸ್ಥಿತಿ. ಇದು ಆ ವಯಸ್ಸಲ್ಲಿ ಬರೋದು ಸಾಮಾನ್ಯ. ಆದ್ರೆ 13 ವರ್ಷದ ಬಾಲಕನೊಬ್ಬ ಮೊಬೈಲ್ ಫೋನ್ ಚಟಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಕ್ಕಳಿಗೆ ಮೊಬೈಲ್ ಫೋನ್ ಕೊಡುವ ಮುನ್ನ ಪೋಷಕರು ಒಂದಲ್ಲ‌ ಎರಡು ಬಾರಿ ಯೋಚಿಸಿ. ಮೊಬೈಲ್ ಫೋನ್ ಗೀಳಿಗೆ ಬಿದ್ದ ಯುವಕನೊಬ್ಬ ನೇಣಿಗೆ ಶರಣಾಗಿರೋ ಆಘಾತಕಾರಿ ಘಟನೆ ರಾಜಧಾನಿಯಲ್ಲಿ ನಡೆದಿದೆ. ಸೊಂಟಕ್ಕೆ ಕಟ್ಟೋ ಉಡದಾರದಿಂದ ನೇಣು ಬಿಗಿದುಕೊಂಡು 13 ವರ್ಷದ ಬಾಲಕ‌ ಧ್ರುವತನ್ನ 9 ವರ್ಷದ ತಂಗಿಯ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದಾನೆ‌. ಅಣ್ಣ ಏನ್ ಮಾಡಿಕೊಳ್ತಿದ್ದನೆಂಬ ಅರಿವು ಇಲ್ಲದೆ ಸುಮ್ಮನೆ ನೋಡ್ತಿದ್ದ 9 ವರ್ಷದ ಬಾಲಕಿ ಅಣ್ಣ ‌ಕುತ್ತಿಗೆಗೆ ಹಾಕಿಕೊಂಡಿದ್ದ ದಾರ ಕಟ್ ಆಗಿ ಕೆಳಗೆ ಬೀಳೊವರೆಗೂ ನೋಡುತ್ತಾ ನಿಂತಿದ್ದಳಂತೆ.

ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಗೊಲ್ಲರಹಟ್ಟಿಯ ರತ್ನ‌ ನಗರದಲ್ಲಿ ನಡೆದ ಕಳೆದ ಸೋಮವಾರ ಈ ಆತಂಕಕಾರಿ ಘಟನೆ ನಡೆದಿದೆ. ಚಿಕ್ಕವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬುದು ನಿಗೂಢವಾಗಿದೆ. ಮನೆಯವರ ಮಾತು ಕೇಳದೆ ಧ್ರುವ ಅತಿ ಹೆಚ್ಚಾಗಿ ಮೊಬೈಲ್ ಫೋನ್ ಬಳಸ್ತಿದ್ದನಂತೆ. ಮೊನ್ನೆ ಬಾಲಕನ ತಂದೆ ತಾಯಿ ಇಬ್ಬರು ಕೂಡ ಕೆಲಸಕ್ಕೆ ಹೋಗಿದ್ರು. ಶಾಲೆ ಮುಗಿಸಿ ಬಂದಿದ್ದ ಅಣ್ಣ ಹಾಗೂ ತಂಗಿ ಇಬ್ಬರೇ ಮನೆಯಲ್ಲಿದ್ರು. ಆಗಲೂ ಮೊಬೈಲ್ ಫೋನ್ ನೋಡ್ತಿದ್ದ ಬಾಲಕ ಧ್ರುವ ಪ್ಯಾಂಟ್ ತೆಗೆದು ಸೊಂಟದ ಉಡದಾರ ಬಿಚ್ಚಿಕೊಂಡು ಫ್ಯಾನ್‌ಗೆ ಕಟ್ಟಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ. ಸಂಜೆ 7 ಗಂಟೆಯ ಸುಮಾರಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆಗ ಉಡದಾರ ಕುತ್ತಿಗೆ ಬಿಗಿಯುತ್ತಿದ್ದಂತೆ, ಕಟ್ ಆಗಿ ಬಾಲಕ ಕೆಳಗೆ ಬಿದಿದ್ದಾನೆ. ಅಣ್ಣ ಏನ್ ಮಾಡ್ಕೊಳ್ತಿದ್ದಾನೆ ಅನ್ನುವ ಅರಿವು ಇಲ್ಲದೆ ಸುಮ್ಮನೆ ನೋಡ್ತಿದ್ದ 9 ವರ್ಷದ ಬಾಲಕಿ ಉಡದಾರ ಕಟ್ ಆಗಿ ಬಾಲಕ‌ ಕೆಳಗೆ ಬೀಳ್ತಿದ್ದಂತೆ ಕಿರುಚಿಕೊಂಡಿದ್ದಾಳೆ. ಆ ಸಮಯಕ್ಕೆ ಕೆಲಸ‌ ಮುಗಿಸಿ ತಾಯಿ ಬಂದಿದ್ದಾರೆ. ಆತಂಕಗೊಂಡ ತಾಯಿ ಅಕ್ಕಪಕ್ಕದವರ ಸಹಾಯ ಪಡೆದು ಆಸ್ಪತ್ರೆಗೆ ಕರೆದುಕೊಂಡ ಹೋಗಿದ್ದಾರೆ. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಬಾಲಕನ ತಂದೆ ಬಸವರಾಜ್ ಬೇಕರಿ ಕೆಲಸ ಮಾಡ್ತಿದ್ದರು, ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಅಂತ ಪೊಲೀಸರ ತನಿಖೆ ನಡೆಸ್ತಿದ್ದಾರೆ. ಬಾಲಕ ಹೆಚ್ಚಾಗಿ ಮೊಬೈಲ್ ಫೋನ್ ಬಳಕೆ ಮಾಡ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಮೊಬೈಲ್ ಫೋನ್‌ನಲ್ಲಿ ಯಾವುದಾದ್ರು ಗೇಮ್‌ಗೆ ಅಡಿಕ್ಟ್ ಆಗಿದ್ನಾ ಅನ್ನೋ ಬಗ್ಗೆ ತನಿಖೆ ನಡೆಸ್ತಿದ್ದಾರೆ‌.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon