ವಾಷಿಂಗ್ಟನ್ : ಸೇನಾ ಹೆಲಿಕಾಪ್ಟರ್ಗೆ ಪ್ರಯಾಣಿಕರಿದ್ದ ವಿಮಾನವೊಂದು ಡಿಕ್ಕಿ ಹೊಡೆದು ನದಿಗೆ ಬಿದ್ದ ಪರಿಣಾಮ 18 ಮಂದಿ ಮೃತಪಟ್ಟ ಘಟನೆ ಅಮೆರಿಕದ ವಾಷಿಂಗ್ಟನ್ ಡಿಸಿಯ ರೊನಾಲ್ಡ್ ರೇಗನ್ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದೆ.
ಅಮೆರಿಕ ಸೇನಾ ಹೆಲಿಕಾಪ್ಟರ್ಗೆ ವಿಮಾನ ಡಿಕ್ಕಿ ಹೊಡೆದಿದ್ದು, ಬಳಿಕ ಪೋಟೋಮ್ಯಾಕ್ ನದಿಗೆ ವಿಮಾನ ಬಿದ್ದಿದೆ. ಸದ್ಯ ನದಿಯಿಂದ ವಿಮಾನದಲ್ಲಿದ್ದ ನಾಲ್ವರನ್ನು ರಕ್ಷಣೆ ಮಾಡಿದ್ದು, 18 ಜನರ ಮೃತದೇಹಗಳನ್ನು ಮೇಲೆತ್ತಲಾಗಿದೆ.
ಅಪಘಾತಕ್ಕೀಡಾದ ವಿಮಾನವು 60 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಕಾನ್ಸಾಸ್ನಿಂದ ಡಿ.ಸಿ.ಯ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಈ ಅವಘಡ ಸಂಭವಿಸಿದೆ. ಬುಧವಾರ ತಡರಾತ್ರಿ ಪೊಟೊಮ್ಯಾಕ್ ನದಿಯಲ್ಲಿ ವಿಮಾನ ಪತನಗೊಂಡಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಪ್ರಾರಂಭಿಸಿದೆ. ವಿಮಾನ ನಿಲ್ದಾಣದಲ್ಲಿ ಎಲ್ಲಾ ಹಾರಾಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.