ನವದೆಹಲಿ :ಲೋಕಸಭೆಯಲ್ಲಿ ಬುಧವಾರ ಅಂಗೀಕಾರವಾದ ವಕ್ಫ್ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಿತು.
ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯಸಭೆಯಲ್ಲೂ ಹೆಚ್ಚಿನ ಸಂಸದರನ್ನು ಹೊಂದಿದೆ. ಬಿಜೆಪಿಯ 98 ಸಂಸದರು, ಮಿತ್ರಪಕ್ಷ ಜೆಡಿಯು ಪಕ್ಷದ ನಾಲ್ವರು, ಎನ್‌ಸಿಪಿಯ ಮೂವರು, ಟಿಡಿಪಿಯ ಇಬ್ಬರು ಮತ್ತು ಆರು ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಎನ್‌ಡಿಎ ಮೈತ್ರಿಕೂಟದ 125 ಸಂಸದರಿದ್ದಾರೆ. ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ ಕಾಂಗ್ರೆಸ್‌ನ 27 ಸಂಸದರು, ತೃಣಮೂಲ ಕಾಂಗ್ರೆಸ್‌ನ 13 ಸೇರಿದಂತೆ 88 ಸಂಸದರನ್ನು ಹೊಂದಿದೆ. ನವೀನ್ ಪಟ್ನಾಯಕ್ ನೇತೃತ್ವದ BJD ಪಕ್ಷವು 7 ಸಂಸದರನ್ನು ಹೊಂದಿದೆ.
ಲೋಕಸಭೆಯಲ್ಲಿ ಸುಮಾರು 12 ಗಂಟೆಗಳ ಕಾಲ ನಡೆದ ಚರ್ಚೆಯ ನಂತರ, ವಕ್ಫ್ (ತಿದ್ದುಪಡಿ) ಮಸೂದೆಯನ್ನು ಇಂದು ರಾಜ್ಯಸಭೆಯಲ್ಲಿ ಕೈಗೆತ್ತಿಕೊಳ್ಳಲಾಯಿತು. ಮಸೂದೆಯ ಪರವಾಗಿ 288 ಮತಗಳು ಮತ್ತು ಮಸೂದೆಯ ವಿರುದ್ಧ 232 ಮತಗಳು ಚಲಾವಣೆಯಾಗಿ, ಲೋಕಸಭೆಯು ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ.
ರಾಜ್ಯಸಭೆಯಲ್ಲಿ ನಡೆದ ಚರ್ಚೆಗಳೇನು? 8.72 ಲಕ್ಷ ವಕ್ಫ್ ಆಸ್ತಿಗಳಿವೆ., 2006 ರಲ್ಲಿ, ಸಾಚಾರ್ ಸಮಿತಿಯು 4.9 ಲಕ್ಷ ವಕ್ಫ್ ಆಸ್ತಿಗಳಿಂದ 12,000 ಕೋಟಿ ರೂ.ಗಳ ಆದಾಯವನ್ನು ಅಂದಾಜಿಸಿದ್ದರೆ, ಈ ಆಸ್ತಿಗಳು ಈಗ ಎಷ್ಟು ಆದಾಯವನ್ನು ಗಳಿಸುತ್ತಿವೆ ಎಂದು ನೀವು ಊಹಿಸಬಹುದು ಎಂದು ರಾಜ್ಯಸಭೆಯಲ್ಲಿ ಕಿರಣ್ ರಿಜಿಜು ಹೇಳಿದರು.