ಚಿತ್ರದುರ್ಗ : ತಾಲೂಕಿನ ಬಂಗಾರಕ್ಕನಹಳ್ಳಿ ಗ್ರಾಮದ ಶ್ರೀಮತಿ ದಿ.! ಯಲ್ಲಮ್ಮ ಶ್ರೀ ಮಲ್ಲಪ್ಪರವರ ಮೊಮ್ಮಗ ರಾಹುಲ ಎಲ್. ಅವರಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ. ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಮಹಿಳಾ ಅಧ್ಯಯನ ವಿಭಾಗದ ಡಾ. ಕಲಾವತಿ ಬಿ.ಜಿ ಅವರ ಮಾರ್ಗದರ್ಶನದಲ್ಲಿ ” ಬಂಡಾಯ ಸಾಹಿತ್ಯದಲ್ಲಿ ಮಹಿಳೆ ಮತ್ತು ಕೌಟುಂಬಿಕ ವಿನ್ಯಾಸಗಳು (ಪ್ರಾತಿನಿಧಿಕ ಕಾದಂಬರಿಗಳನ್ನು ಅನುಲಕ್ಷಿಸಿ) ” ಎಂಬ ವಿಷಯದಲ್ಲಿ ಮಹಾ ಪ್ರಬಂಧವನ್ನು ಸಲ್ಲಿಸಿದರು.
ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ನಡೆದ ೩೪ ನೇ ನುಡಿಹಬ್ಬ ಘಟಿಕೋತ್ಸವದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಉನ್ನತ ಶಿಕ್ಷಣ ಸಚಿವರಾದ ಎಂ.ಸಿ. ಸುಧಾಕರ್ ಪಿಎಚ್. ಡಿ ಪದವಿ ಪ್ರದಾನ ಮಾಡಿದರು. ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳು ಮತ್ತು ಉಪ ಕುಲಪತಿಗಳು, ಹಾಗೂ ಕುಲಸಚಿವರು, ನಿರ್ದೇಶಕರು ಹಾಗೂ ವಿಭಾಗದ ಮುಖ್ಯಸ್ಥರು ಘಟಿಕೋತ್ಸವದಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ಬಂಗಾರಕ್ಕನಹಳ್ಳಿ ಗ್ರಾಮದ ಗ್ರಾಮಸ್ಥರು, ಕುಟುಂಬದವರು, ಸಂಬಂಧಿಕರು, ಗುರು ಹಿರಿಯರು ಹಾಗೂ ಸ್ನೇಹಿತರು ಅಭಿನಂದಿಸಿದರು.































