ಚಿತ್ರದುರ್ಗ: ಚಿತ್ರದುರ್ಗ ನಗರದ ಹೊರ ಭಾಗದಲ್ಲಿರುವ ಜೆಎಂಐಟಿ ಕ್ಯಾಂಪಸ್ ನ ಪಕ್ಕದಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಸದಾಗಿ ನಿರ್ಮಿಸಲಾಗಿರುವ ಸ್ಕೈ ವಾಕರಿಗೆ ವಿದ್ಯುತ್ ಚಾಲಿತ ಲಿಫ್ಟನ್ನು ಅಳವಡಿಸಿ, ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ, ಗರ್ಭಿಣಿ ಮಹಿಳೆಯರಿಗೆ, ರೋಗಿಗಳಿಗೆ ಮಕ್ಕಳಿಗೆ ಸಾಮಾನು ಸರಂಜಾಮುಗಳನ್ನು ದಾಟಿಸಲು ಅನುಕೂಲಕರವಾಗುವಂತ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ, ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ ಎಚ್ ಕೆ ಎಸ್ ಸ್ವಾಮಿಯವರು ರಾಷ್ಟ್ರೀಯ ಹೆದ್ದಾರಿ ನಿಗಮದ ಅಧಿಕಾರಿಗಳಿಗೆ, ಜಿಲ್ಲಾ ಆಡಳಿತಕ್ಕೆ ವಿನಂತಿಸಿಕೊಂಡಿದ್ದಾರೆ.
ಅವರು ಚಿತ್ರದುರ್ಗ ನಗರದ ಹೊರ ಭಾಗದಲ್ಲಿರುವ ಜೆಎಂಐಟಿ ಕ್ಯಾಂಪಸ್ ಎದುರುಗಡೆ ನಿರ್ಮಾಣವಾಗಿರುವ ಸ್ಕೈ ವಾಕ್ ರ ಮೇಲೆ ಸರಕು ಸಾಮಾನುಗಳನ್ನು ಸಾಗಿಸುವಾಗ ಹಿರಿಯ ನಾಗರಿಕರಿಗೆ ಅನುಕೂಲವಾಗಲೆಂದು ಲಿಫ್ಟ್ ಅಳವಡಿಸಲು ಜಾಗೃತಿ ಮೂಡಿಸುತ್ತಿದ್ದರು.
ಜಿಎಂಐಟಿ ಕ್ಯಾಂಪಸ್ ನಿಂದ ನೂರಾರು ವಿದ್ಯಾರ್ಥಿಗಳು, ಗ್ರಾಮಸ್ಥರು, ಸಾರ್ವಜನಿಕರು ರಸ್ತೆ ದಾಟಲು ಬಹಳ ವರ್ಷಗಳಿಂದ ಹೋರಾಟ ಮಾಡಿದ ನಂತರ ಸ್ಕೈ ವಾಕರ್ ನಿರ್ಮಿಸಿ ಕೊಡಲಾಗಿದೆ, ಆದರೆ ಈಗ ಸ್ಕೈ ವಾಕ್ ನಾ ಹತ್ತಿ ಇಳಿಯಲು ಅಸಹಾಯಕ ಜನರಿಗೆ, ವೃದ್ಧರಿಗೆ, ವಯಸ್ಸಾದವರಿಗೆ, ಮಹಿಳೆಯರಿಗೆ, ಗರ್ಭಿಣಿ ಸ್ತ್ರೀಯರಿಗೆ, ವಸ್ತುಗಳನ್ನು ಸಾಗಿಸುವಂತಹ ಪ್ರಯಾಣಿಕರಿಗೆ ಕಷ್ಟಕರವಾಗಿದ್ದು, ರಾಷ್ಟ್ರೀಯ ಹೆದ್ದಾರಿ ನಿಗಮದವರು ಮತ್ತು ಜಿಲ್ಲಾಡಳಿತ ಇದಕ್ಕೊಂದು ವಿದ್ಯುತ್ ಚಾಲಿತ ಲಿಫ್ಟನ್ನು ಅಳವಡಿಸಿ, ನೂರಾರು ಜನರಿಗೆ ಸಹಾಯ ಮಾಡಬೇಕೆಂದು ಎನಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸಣ್ಣ ಸಣ್ಣ ಸ್ಕೈ ವಾಕರ್ ಗಳಿಗೂ ಸಹ ವಿದ್ಯುತ್ ಚಾಲಿತ ಲಿಫ್ಟ್ ಗಳನ್ನು ಅಳವಡಿಸಿ ಜನರಿಗೆ ಸಹಾಯ ಮಾಡಿರುವ ದೃಶ್ಯವನ್ನು ನೋಡಿದಾಗ, ಚಿತ್ರದುರ್ಗದಲ್ಲಿ, ಜಿಲ್ಲಾ ಕೇಂದ್ರ ಭಾಗವಾಗಿದ್ದು ನಗರಕ್ಕೆ ಒಂದೇ ಒಂದು ಸ್ಕೈ ವಾಕರಾ ನಿರ್ಮಿಸಿದ್ದು, ಅದು ಬಹಳ ವರ್ಷಗಳ ನಂತರ, ಅಪಘಾತಗಳಾಗಿ, ಜನರು ಪ್ರಾಣ ಕಳೆದುಕೊಂಡ ನಂತರ, ಈ ಸ್ಕೈ ವಾಕರ್ ನಿರ್ಮಿಸಿದ್ದು, ಅದಕ್ಕೊಂದು ಲಿಫ್ಟ್ ಅಳವಡಿಸಿ ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ನಿಗಮದವರು ಧಾರಣವಾಗಿ ಸಾರ್ವಜನಿಕ ಹಣವನ್ನು ಬಳಕೆ ಮಾಡಿ, ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ವಿನಂತಿಸಿಕೊಂಡಿದ್ದಾರೆ.
ಗಣಿ ಕೈಗಾರಿಕೆಯ ಭಾದಿತ ಪ್ರದೇಶವೆಂದು ಗಣಿ ಕೈಗಾರಿಕೆಯ ಹಣ, ಸಾವಿರಾರು ಕೋಟಿ ಚಿತ್ರದುರ್ಗದ ಜಿಲ್ಲೆಯಿಂದ ಬಳಕೆ ಆಗದೆ ಹಾಗೆ ಕೊಳೆತು ಕೂತಿದೆ, ಅಂತಹುದರಲ್ಲಿ ಒಂದು ಸ್ಕೈ ವಾಕರಿಗೆ ಒಂದೆರಡು ಲಿಫ್ಟ್ ಗಳನ್ನು ಅಳವಡಿಸಿ ಕೊಟ್ಟರೆ ಬ್ಯಾಂಕಿನಲ್ಲಿರುವ ಹಣವೇನು ಪೂರ್ತಿ ಖಾಲಿಯಾಗುವುದಿಲ್ಲ, ಜನರಿಗೆ ಸಹಾಯ ಮಾಡಿ, ಆಸಹಾಯಕ ಜನರಿಗೆ, ವೃದ್ಧರಿಗೆ, ಗರ್ಭಿಣಿ ಮಹಿಳೆಯರಿಗೆ, ಅಂಗವಿಕಲರಿಗೆ,b ರಸ್ತೆ ದಾಟುವಂತಹ ಏರ್ಪಾಡು ಮಾಡಿಕೊಡಲು ಅಳವಡಿಸಿಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ.
ಅದೇ ರೀತಿ ಬಸವೇಶ್ವರ ಆಸ್ಪತ್ರೆಯ ಅಕ್ಕಪಕ್ಕದಲ್ಲಿರುವ ಜನರಿಗೂ ಸಹ ರಸ್ತೆ ದಾಟಲು ಕಷ್ಟಕರವಾಗುತ್ತಿದ್ದು, ಅಲ್ಲಿಯೂ ಸಹ ಒಂದು ಸ್ಕೈ ವಾಕರ್ ನಿರ್ಮಿಸಿ ರೋಗಿಗಳಿಗೆ ರಸ್ತೆ ದಾಟಲು ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ.
ಎಲ್ಲಾ ಅಭಿವೃದ್ಧಿಗಳನ್ನು ಮಹಾನಗರಗಳಲ್ಲಿ ಮಾಡುವುದಕ್ಕಿಂತ ಸಣ್ಣ ಸಣ್ಣ ನಗರದಲ್ಲೂ ಸಹ ಸಾರ್ವಜನಿಕರಿಗೆ ಸುಲಭವಾಗಿ ರಸ್ತೆ ದಾಟುವಂತ ವ್ಯವಸ್ಥೆ ಕಲ್ಪಿಸಿ ಕೊಡಬೇಕಾದ್ದು ಅಧಿಕಾರಿಗಳ ಕರ್ತವ್ಯವಾಗಿದೆ, ಜನಪ್ರತಿನಿಧಿಗಳು ಸ್ಕೈ ವಾಕರ್ ಗಳ ಮುಖಾಂತರ ನಡೆದಾಡಿಕೊಂಡು ಒಂದೆರಡು ಸಾರಿ ಅನುಭವ ಪಡೆದಾಗ, ನೂರಾರು ಮೆಟ್ಟಲುಗಳನ್ನು ಹತ್ತಿ ಇಳಿದು ಸಂಚಾರ ಮಾಡುವುದು, ದಿನನಿತ್ಯ ಓಡಾಡುವುದು ಸಾರ್ವಜನಿಕರಿಗೆ ಎಷ್ಟು ಕಷ್ಟಕರವಾಗುತ್ತದೆ ಎಂಬುದನ್ನು ಆಧಾರವಾಗಿಟ್ಟುಕೊಂಡು, ಇವುಗಳಿಗೆ ಲಿಫ್ಟನ್ನು ಅಳವಡಿಸಿ ಕೊಡಬೇಕೆಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊಂಡಿದ್ದಾರೆ.































