ತಿಪಟೂರು: ತಿಪಟೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಒಣಕೊಬ್ಬರಿ (ಉಂಡೆ ಕೊಬ್ಬರಿ) ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದೆ.
ಗುಣಮಟ್ಟದ ಕೊಬ್ಬರಿಯು ಕ್ವಿಂಟಲ್ಗೆ ₹38,000ನಂತೆ ಮಾರಾಟವಾಗಿದೆ. ಕೊಬ್ಬರಿ ಮಾರುಕಟ್ಟೆಯ ಇತಿಹಾಸದಲ್ಲೇ ಕ್ವಿಂಟಲ್ಗೆ ಲಭಿಸಿದ ಗರಿಷ್ಠ ಮೊತ್ತ ಇದಾಗಿದೆ.
ಕಳೆದ ಸೋಮವಾರವಷ್ಟೇ ₹32,000 ಗಡಿ ದಾಟಿದ್ದ ಕೊಬ್ಬರಿ ಬೆಲೆ, ಗುರುವಾರ ವೇಳೆಗೆ ₹36,000ಕ್ಕೆ ತಲುಪಿತ್ತು. ಈಗ ಕೇವಲ ನಾ ದಿನಗಳಲ್ಲಿ ₹38,000ಕ್ಕೆ ಜಿಗಿದಿದೆ.

































