ಅಮೆರಿಕ: ಇರಾನ್ ವಿರುದ್ಧ ದಾಳಿಗಳನ್ನು ಮತ್ತೆ ಆರಂಭಿಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಸಿದ್ದಾರೆ.
ಅವರು ಆಕ್ರಮಣಕಾರಿಯಾಗಿ ವರ್ತಿಸಿದರೆ ಅಥವಾ ಏನಾದರೂ ತಪ್ಪು ಮಾಡಿದರೆ ದಾಳಿಗಳನ್ನು ಪುನರಾರಂಭಿಸಲಾಗುವುದು ಎಂದಿದ್ದಾರೆ.
ಸದ್ಯ ಇರಾನ್ ದೇಶದ ನಾಯಕರು ಒಪ್ಪಂದಕ್ಕೆ ಬರಲು ಎದುರು ನೋಡುತ್ತಿದ್ದಾರೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಇನ್ನು, ಸಂಘರ್ಷವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ 14 ಅಂಶಗಳ ಪ್ರಸ್ತಾವನೆಯನ್ನು ಇರಾನ್ ಅಮೆರಿಕಕ್ಕೆ ಕಳುಹಿಸಿದೆ.
































