ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಅನುದಿನಂಗಳೆಂಬವು ಪ್ರಣತೆಯಾಗಿ,
ವರುಷವೆಂಬವು ಬತ್ತಿಯಾಗಿ,
ಜೀವಜಾತಿಯ ಬೆಳಗ ಬೆಳಗಿನಲರಿಯಬೇಕು.
ಬೆಳಗುಳ್ಳಲ್ಲಿ ಆತ ನಡೆಸಿದಂತೆ ನಡೆಯಬೇಕು.
ಬೆಳಗುಳ್ಳಲ್ಲಿ ಆತ ನುಡಿಸಿದಂತೆ ನುಡಿಯಬೇಕು.
ಎಣ್ಣೆಯೆಂಬ ಜವ್ವನ ಸವೆಯದ ಮುನ್ನ,
ಬೆಳಗು ಕತ್ತಲೆಯಾಗದ ಮುನ್ನರೇಕಣ್ಣಪ್ರಿಯ ನಾಗಿನಾಥಿÁ, ಬೆಳಗ ಬೆಳಗಿನಲರಿಯಬೇಕು.
-ಬಹುರೂಪಿ ಚೌಡಯ್ಯ
































