ಜಿಲ್ಲೆಯಲ್ಲಿನ ನಿಷ್ಕ್ರೀಯ ಸೌಹಾರ್ಧ ಸಹಕಾರಿಗಳ ಸಮಾಪನೆಗೆ ಕ್ರಮ

WhatsApp
Telegram
Facebook
Twitter
LinkedIn

ಚಿತ್ರದುರ್ಗ: ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ ಹಾಗೂ ಉಪನಿಯಮಗಳ ಅನ್ವಯ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿರುವ ಜಿಲ್ಲೆಯ ನಿಷ್ಕ್ರೀಯ ಸೌಹಾರ್ದ ಸಹಕಾರಿ ಸಂಸ್ಥೆಗಳನ್ನು ಸಮಾಪನೆಗೊಳಿಸಲು ಸಹಕಾರ ಸಂಘಗಳ ಉಪನಿಬಂಧಕರು ಕ್ರಮ ಕೈಗೊಂಡಿದ್ದಾರೆ.

ಸಹಕಾರಿಗಳು ನಿಯಮಾವಳಿಗಳಂತೆ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿರುವುದರಿಂದ, ಅವುಗಳನ್ನು ಸಮಾಪನೆಗೊಳಿಸುವಂತೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಕೋರಿದ್ದಾರೆ.  ಸಂಬಂಧಪಟ್ಟ ಸಹಕಾರಿಗಳು ಪ್ರಸ್ತುತ ವ್ಯವಹಾರ ನಡೆಸುತ್ತಿವೆಯೇ ಅಥವಾ ಇಲ್ಲವೇ ಎಂಬುದರ ಕುರಿತು, ಪ್ರಕಟಣೆಯ 15 ದಿನಗಳ ಒಳಗಾಗಿ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕಾರ್ಯದರ್ಶಿಗಳು ಅಥವಾ ವ್ಯವಸ್ಥಾಪಕರು ಉಪನಿಬಂಧಕರ ಕಚೇರಿಗೆ ಮಾಹಿತಿ ಸಲ್ಲಿಸಬೇಕಿದೆ.

ಸಂಸ್ಥೆಗಳ ಸಮಾಪನೆಗೆ ಸಂಬಂಧಿಸಿದಂತೆ ಸಹಕಾರಿಯ ಸದಸ್ಯರಿಂದ ಅಥವಾ ಸಾರ್ವಜನಿಕರಿಂದ ಯಾವುದೇ ರೀತಿಯ ಆಕ್ಷೇಪಣೆಗಳಿದ್ದಲ್ಲಿ, ಅವುಗಳನ್ನು ಸಹ 15 ದಿನಗಳ ಒಳಗಾಗಿ ಚಿತ್ರದುರ್ಗದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಗೆ ಲಿಖಿತ ರೂಪದಲ್ಲಿ ಸಲ್ಲಿಸಲು ಕೋರಲಾಗಿದೆ. ನಿಗದಿತ ಅವಧಿಯ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಸಮಾಪನೆಗೊಳ್ಳಲಿರುವ ಸಹಕಾರಿ ಸಂಸ್ಥೆಗಳು ಇಂತಿವೆ. ಹಿರಿಯೂರು ತಾಲ್ಲೂಕಿನ ವಿ.ವಿ.ಪುರದ ಜ್ಯೋತಿ ಸ್ವಶಕ್ತಿ ಸೌಹಾರ್ದ ಸ್ವಸಹಾಯ ಸಹಕಾರಿ ನಿ., ಮೊಳಕಾಲ್ಮೂರು ತಾಲ್ಲೂಕಿನ ರಾಮಪುರದ ಗಾಯತ್ರಿ ಸ್ವಶಕ್ತಿ ಸೌಹಾರ್ದ ಸ್ವಸಹಾಯ ಸಹಕಾರಿ ನಿ., ಚಳ್ಳಕೆರೆ ತಾಲ್ಲೂಕಿನ ಐಶ್ವರ್ಯ ಸ್ವಶಕ್ತಿ ಸೌಹಾರ್ದ ಸ್ವಸಹಾಯ ಸಹಕಾರಿ ನಿ., ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದ ಭಾರತಿ ಸ್ವಶಕ್ತಿ ಸೌಹಾರ್ದ ಸ್ವಸಹಾಯ ಸಹಕಾರಿ ನಿ., ಮೊಳಕಾಲ್ಮೂರು ತಾಲ್ಲೂಕಿನ ತುಮಕೂರ್ಲಹಳ್ಳಿಯ ಕವಾಡ ಶ್ರೀ ವನಸಿರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ., ಚಳ್ಳಕೆರೆಯ ಎಲ್..ಸಿ ಕಚೇರಿ ಸಮೀಪದ ರತ್ನ ಸೌಹಾರ್ದ ಪತ್ತಿನ ಸಹಕಾರಿ ನಿ., ಹೊಸದುರ್ಗದ ಎಸ್.ಜೆ.ಎಂ. ಎಕ್ಸ್ಟೆನ್ಷನ್ ಶ್ರೀ ಗೋಳಹಟ್ಟಿ ಡಿ ಶೇಖರ ಅಭಿಮಾನಿ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ನಿ, ಚಿತ್ರದುರ್ಗದ ಬಾಲಸಿದ್ಧೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ, ಚಿತ್ರದುರ್ಗ ಕಂಟ್ರಾಕ್ಟರ್ ಪತ್ತಿನ ಸೌಹಾರ್ದ ಸಹಕಾರಿ, ಹಿರಿಯೂರು ತಾಲ್ಲೂಕಿನ ಹುಳಿಯಾರು ರಸ್ತೆಯ ಮಾರುತಿ ಕಟ್ಟದ ವಾಲ್ಮೀಕಿ ಪತ್ತಿನ ಸೌಹಾರ್ದ ಸಹಕಾರಿ, ಹೊಸದುರ್ಗ ಟೌನ್ ಟಿ.ಬಿ.ಸರ್ಕಲ್ ಸೇವಾ ನಿರತ ನೌಕರರ ವಿವಿದೋದ್ದೇಶ ಸೌಹಾರ್ದ ಸಹಕಾರಿ, ಚಿತ್ರದುರ್ಗದಮಾಪತ್ತಿನ ಸೌಹಾರ್ದ ಸಹಕಾರಿ, ಮೊಳಕಾಲ್ಮುರು ತಾಲ್ಲೂಕಿನ ಹೆಚ್.ಆರ್.ರಸ್ತೆಯ ಡಿ.ಸಿ.ಸಿ. ಬ್ಯಾಂಕ್ ಮೇಲ್ಭಾಗದ ಸಂಗೋಳ್ಳಿ ರಾಯಣ್ಣ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಗಳು ಸಮಾಪನೆ ಪ್ರಕ್ರಿಯೆಗೆ ಒಳಪಟ್ಟಿವೆ ಎಂದು ಚಿತ್ರದುರ್ಗ ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.

(AI ಚಿತ್ರ) 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon