ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
: ಐದು ತತ್ತ್ವಂಗಳಿಂದಾದ ದೇಹಕ್ಕೆ ರೋಗರುಜೆಯಹುದೆ ?
ಕಾಯತತ್ವಂಗಳ ಗೊತ್ತಿನಲ್ಲಿ ನಿಂದು,
ಅವರವರ ಚಿಕಿತ್ಸೆಯಲ್ಲಿ ಹೊತ್ತು ನಿತ್ತರಿಸುವುದೆ ಕ್ರಮ.
ಅದೆಂತೆಂದಡೆ :
ಭಕ್ತಿನಿಷ್ಠೆ , ವಿಶ್ವಾಸನಿಷ್ಠೆ, ಜ್ಞಾನನಿಷ್ಠೆ.
ಇಂತಿ ಸದ್ಭಾವ ನೆಲೆಗೊಳ್ಳದ ಕಾರಣ,
ತನುವಿಂಗೆ ಅನುಪಾನವ ಪಾನವ ಮಾಡಬೇಕು.
ಮೇಲೆ ಅರಿದಡೆ, ಮನವು ಮನದಲ್ಲಿ ನಿಲಬೇಕು.ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನೊಡಗೂಡಬೇಕು.
-ವೈದ್ಯ ಸಂಗಣ್ಣ






























