ಚಿತ್ರದುರ್ಗ: 2020-21 ರಿಂದ 2023-24ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ವಿವಿಧ ಘಟಕಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 30 ಅರ್ಜಿ ಸಲ್ಲಿಸಲು ಕೊನೆಯ ದಿನ.
ಈ ಯೋಜನೆಯಡಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 40 ರಷ್ಟು ಹಾಗೂ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ. 60 ರಷ್ಟು ಸಹಾಯಧನ ನೀಡಲಾಗುವುದು. ಆಸಕ್ತರು ಅಗತ್ಯ ದಾಖಲಾತಿಗಳೊಂದಿಗೆ ಜೂನ್ 30 ರೊಳಗಾಗಿ ತಮ್ಮ ವ್ಯಾಪ್ತಿಯ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಲು ಕೋರಿದೆ.
ಯೋಜನೆಯಡಿ ಇನ್ಸುಲೇಟೆಡ್ ವಾಹನಗಳು (ಘಟಕ ವೆಚ್ಚ ರೂ. 20 ಲಕ್ಷ, ಗುರಿ-1, ಪರಿಶಿಷ್ಟ ವರ್ಗ), ಐಸ್ ಬಾಕ್ಸ್ ಒಳಗೊಂಡ ಮೋಟಾರ್ ಸೈಕಲ್ (ಘಟಕ ವೆಚ್ಚ ರೂ. 0.75 ಲಕ್ಷ, ಗುರಿ-3, ಸಾಮಾನ್ಯ ವರ್ಗ), ಮೀನು ಮಾರಾಟಕ್ಕಾಗಿ ಐಸ್ ಬಾಕ್ಸ್ ಒಳಗೊಂಡ ತ್ರಿಚಕ್ರ ವಾಹನ/ಇ-ರಿಕ್ಷಾ (ಘಟಕ ವೆಚ್ಚ ರೂ. 3 ಲಕ್ಷ, ಗುರಿ-1, ಸಾಮಾನ್ಯ ವರ್ಗ) ಹಾಗೂ ಸಜೀವ ಮೀನು ಮಾರಾಟ ಕೇಂದ್ರಗಳ ಸ್ಥಾಪನೆಗೆ (ಘಟಕ ವೆಚ್ಚ ರೂ. 20 ಲಕ್ಷ, ಗುರಿ-1, ಪರಿಶಿಷ್ಟ ವರ್ಗ) ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ತಾಲ್ಲೂಕುಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದಾಗಿದೆ. ಚಿತ್ರದುರ್ಗ ಮತ್ತು ಮೊಳಕಾಲ್ಮುರು ಮೀನುಗಾರಿಕೆ ಸಹಾಯಕ ನಿರ್ದೇಶಕ ತುಳಸೀದಾಸ್-9342187356, ಹಿರಿಯೂರು ಮೀನುಗಾರಿಕೆ ಸಹಾಯಕ ನಿರ್ದೇಶಕ ಎನ್.ಮಂಜುನಾಥ್-7022933310, ಚಳ್ಳಕೆರೆ ಮೀನುಗಾರಿಕೆ ಸಹಾಯಕ ನಿರ್ದೇಶಕಿ ದೀಪಾಲಿ-9740900866 ಹಾಗೂ ಹೊಸದುರ್ಗ ಮತ್ತು ಹೊಳಲ್ಕೆರೆ ಮೀನುಗಾರಿಕೆ ಸಹಾಯಕ ನಿರ್ದೇಶಕ ವೆಂಕಟೇಶ್ವರ-9945004235 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.






























