ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಭವಿ ಭಕ್ತನಾದರೇನಯ್ಯಾ ಪೂರ್ವಾಶ್ರಯವಳಿಯದನ್ನಕ್ಕ ?
ವೇಶಿ ಭಕ್ತೆಯಾದರೇನಯ್ಯಾ ಎಂಜಲ ತಿಂಬುದ ಬಿಡದನ್ನಕ್ಕ ?
ಅರಸು ಭಕ್ತನಾದರೇನಯ್ಯಾ, ಅಹಂಕಾರವಳಿಯದನ್ನಕ್ಕ ?
ಇಂತೀ ಮೂವರಿಗೆ ಲಿಂಗವ ಕೊಟ್ಟಾತ ವ್ಯವಹಾರಿ, ಕೊಂಡಾತ ಲಾಭಗಾರ
ಇವರ ಭಕ್ತಿಯೆಂಬುದು,
ಒಕ್ಕಲಗಿತ್ತಿ ಹೊಸ್ತಿಲ ಪೂಜೆಯ ಮಾಡಿ, ಇಕ್ಕಾಲಿಕ್ಕಿ ದಾಟಿದಂತಾಯಿತ್ತು.
ಹಟ್ಟಿಯ ಹೊರಗೆ ಬೆನವನ ಪೂಜೆಯ ಮಾಡಿ
ತಿಪ್ಪೆಯೊಳಗೆ ಬಿಟ್ಟಂತಾಯಿತ್ತು.
ಜಂಗಮದ ಪೂಜೆಯ ಮಾಡಿ ನೈಷ್ಠೆಯಿಲ್ಲದ ಭ್ರಷ್ಟರ ಮೆಚ್ಚುವನೆ
ಕೂಡಲಚೆನ್ನಸಂಗಮದೇವ ?
-ಚೆನ್ನಬಸವಣ್ಣ

































