ಬೆಂಗಳೂರು: ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದೆ. ಇನ್ನು ಮುಂದೆ ಶನಿವಾರ ಶಾಲೆಗಳು ಹೊಸ ಸಮಯದಂತೆ ನಡೆಯಲಿದೆ.
ಇನ್ನು ಮುಂದೆ ಶನಿವಾರ ಬೆಳಗ್ಗೆ 8.30-12.30 ರವರೆಗೆ ತರಗತಿಗಳು ನಡೆಸುವಂತೆ ಆದೇಶ ಹೊರಡಿಸಲಾಗಿದೆ. ಈ ವರೆಗೆ ರಾಜ್ಯದ ಕೆಲ ಜಿಲ್ಲೆಗಳ ಕೆಲ ಶಾಲೆಗಳಲ್ಲಿ ಬೆಳಗ್ಗೆ 8- 12 ಗಂಟೆಯವರೆಗೆ, ಇನ್ನೂ ಕೆಲ ಕಡೆ 7.30- 11.30ರವರೆಗೆ ಶಾಲೆ ನಡೆಯುತ್ತಿತ್ತು.
ಆದರೆ, ಈಗ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಒಂದೇ ಸಮಯವನ್ನು ಪಾಲಿಸಬೇಕು ಎಂದು ಸೂಚನೆ ನೀಡಿದೆ.































