ಚಿತ್ರದುರ್ಗ : ಕೋಟೆ ಆವರಣದಲ್ಲಿರುವ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಆಷಾಡ ಮಾಸದ ಅಮಾವಾಸೆಯಂದು ಮಂಗಳವಾರ ವಿಶೇಷವಾಗಿ ಅಲಂಕರಿಸಿ ಪೂಜಿಸಿಲಾಯಿತು.
ಸುಗಂಧರಾಜ, ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಗುಲಾಬಿ, ಹಸಿರು ಪತ್ರೆ ಸೇರಿದಂತೆ ಬಗೆ ಬಗೆಯ ಹೂವಿನ ಹಾರಗಳಿಂದ ಸಿಂಗರಿಸಿ ಬೆಳಗಿನಿಂದ ಸಂಜೆಯತನಕ ಪೂಜಿಸಲಾಯಿತು.
ನೂರಾರು ಭಕ್ತರು ಧಾವಿಸಿ ಬನಶಂಕರಿ ಅಮ್ಮನವರಿಗೆ ಶ್ರದ್ದಾ ಭಕ್ತಿಯನ್ನು ಸಮರ್ಪಿಸಿದರು.
ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಶಿವ ಪಾರ್ವತಿಯ ಗಿರಿಜಾ ಕಲ್ಯಾಣೋತ್ಸವ ಕೂಡ ನಡೆಯಿತು.
ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ದೇವಸ್ಥಾನದ ಭಕ್ತ ಮಂಡಳಿಯವರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.
































