ಚಿತ್ರದುರ್ಗ: ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕೆಂದೇ ಹೆಸರಾಗಿರುವ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕು ಈ ಸಾಲಿಗೆ ಅಮೃತ ಮಹೋತ್ಸವ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಬ್ಯಾಂಕಿನ ಸದಸ್ಯರ, ಗ್ರಾಹಕರ, ಸಾರ್ವಜನಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ವರ್ಷದಅಂತ್ಯಕ್ಕೆ ಬ್ಯಾಂಕಿನಅಮೃತ ಮಹೋತ್ಸವವನ್ನು ನಗರದಲ್ಲಿಎರಡು ದಿನಗಳ ಕಾಲ ಅದ್ದೂರಿಯಾಗಿಆಚರಿಸಲಾಗುವುದುಎಂದು ಬ್ಯಾಂಕಿನ ನೂತನಅಧ್ಯಕ್ಷರಘುರಾಮರೆಡ್ಡಿ ಘೋಷಿಸಿದರು.
ಕರ್ನಾಟಕರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು, ಚಿತ್ರದುರ್ಗಜಿಲ್ಲಾ ಸಹಕಾರಕೇಂದ್ರ ಬ್ಯಾಂಕಿನ ನಿರ್ದೇಶಕರುಆಗಿರುವ, ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕಿನಅಧ್ಯಕ್ಷರಾದರಘು ರಾಮರೆಡ್ಡಿ ನಗರದ ಚಳ್ಳಕೆರೆ ರಸ್ತೆಯ ಎಸ್.ಜಿ. ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕಿನ ೭೫ನೇ ವಾರ್ಷಿಕ ಸಾಮಾನ್ಯ ಸಭೆಯತಮ್ಮ ಚೊಚ್ಚಲ ಸಭೆಯಅಧ್ಯಕ್ಷತೆಯ ನುಡಿಗಳನ್ನಾಡಿದರು.
ಬ್ಯಾಂಕಿನ ನಿಕಟಪೂರ್ವಅಧ್ಯಕ್ಷರಾದಎಸ್.ಆರ್. ಲಕ್ಷ್ಮಿಕಾಂತರೆಡ್ಡಿಅವರ ಮಹಾದಾಸೆಯಂತೆ ಆಡಳಿತ ಮಂಡಳಿಯ ಸರ್ವಾನುಮತದತೀರ್ಮಾನದಂತೆ ಬ್ಯಾಂಕಿನ ಸದಸ್ಯರಅಂತ್ಯ ಸಂಸ್ಕಾರ ನಿಧಿಯನ್ನು ಹಾಲಿ ಇರುವರೂ. ೧೫,೦೦೦ ದಿಂದರೂ. 25,೦೦೦ ಕ್ಕೆ ಹೆಚ್ಚಿಸುವುದಾಗಿಘೋಷಣೆ ಮಾಡಿದಾಗ, ಸಭೆಯಲ್ಲಿ ಉಪಸ್ಥಿತರಿದ್ದ ಸರ್ವ ಸದಸ್ಯರುಕರತಾಡನದ ಮೂಲಕ ಸ್ವಾಗತಿಸಿದರು.
ಹಾಗೆಯೇ ಬ್ಯಾಂಕಿನ ಹತ್ತು ಹಲವು ಸೌಲಭ್ಯಗಳ ಜೊತೆಗೆ ದಶಕಗಳಿಂದ ಶೇರುದಾರರಿಗೆ ವಿತರಣೆ ಮಾಡಿಕೊಂಡು ಬರುತ್ತಿದ್ದ ಬ್ಯಾಂಕಿನ ಲಾಭಾಂಶವನ್ನು ಈ ವರ್ಷವೂ ಶೇ. ೨೫ ರಷ್ಟು ವಿತರಣೆ ಮಾಡಲು ಸಭೆಯಒಪ್ಪಿಗೆ ಕೇಳಿದಾಗ ಮತ್ತೊಮ್ಮೆಕರತಾಡನದೊಂದಿಗೆ ಸದಸ್ಯರುಒಪ್ಪಿಗೆ ಸೂಚಿಸಿದರು.
ನಿಕಟಪೂರ್ವಅಧ್ಯಕ್ಷರ ಮಹಾದಾಸೆಯಂತೆ ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳುವ ಬಡ, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿವಾಯಿದೆಸಾಲದ ಬಡ್ಡಿದರವನ್ನು ಶೇ. ೧೩ ರಿಂದ ೧೦ಕ್ಕೆ ಇಳಿಸುವುದಾಗಿಯೂ, ಎಲ್ಲಾರೀತಿಯ ಸಾಲಗಳ ಮೇಲೆ ಈಗಿರುವ ಬಡ್ಡಿದರವನ್ನು ಶೇ. ೦.೫೦ ರಷ್ಟು ಬಡ್ಡಿಕಡಿಮೆ ಮಾಡಲಾಗುವುದುಎಂದು ಸದಸ್ಯರ ಹರ್ಷೋದ್ಗಾರಗಳೊಂದಿಗೆ ಘೋಷಿಸಿದರು.
ಬ್ಯಾಂಕು ೨೦೨೫-೨೬ನೇ ಸಾಲಿನಲ್ಲಿಅಂದರೆ ೩೧-೦೩-೨೦೨೬ರ ಅಂತ್ಯಕ್ಕೆ ಬ್ಯಾಂಕಿನತೆರಿಗೆ ಮತ್ತು ಅವಕಾಶಗಳ ಮುಂಚಿನ ವರಮಾನವುರೂ. ೫.೫೭ ಕೋಟಿಗಳಿದ್ದು, ಈ ಪೈಕಿ ತೆರಿಗೆ ಮತ್ತು ಅವಕಾಶಗಳಿಗೆ ರೂ. ೧.೭೧ ಕೋಟಿ ಪಾವತಿಸಿದ ನಂತರ ನಿವ್ವಳ ವರಮಾನವುರೂ. ೩.೮೬ ಕೋಟಿಗಳಾಗಿರುತ್ತದೆ ಎಂದುರಘುರಾಮರೆಡ್ಡಿ ಬ್ಯಾಂಕಿನ ನಿವ್ವಳ ಅನುತ್ಪಾದಕ ಸಾಲ ಶೂನ್ಯ ಪ್ರಮಾಣದಲ್ಲಿರುವುದು ಬ್ಯಾಂಕಿನ ಸದೃಢತೆಯನ್ನು ಪ್ರತಿಬಿಂಬಿಸುತ್ತದೆಎAದು ತಿಳಿಸಿದರಲ್ಲದೇ, ೨೦೨೬-೨೭ನೇ ಸಾಲಿನ ಆಯವ್ಯಯಕ್ಕೆ ಸದಸ್ಯರುಗಳಿಂದ ಅನುಮೋದನೆ ಪಡೆದರು.
ಇದೇ ಸಂದರ್ಭದಲ್ಲಿ ೪೨ ವರ್ಷಗಳ ಕಾಲ ಬ್ಯಾಂಕಿನ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಮೂರೂವರೆ ದಶಕಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಹಾಲಿ ನಿರ್ದೇಶಕರಾಗಿರುವ ಸಹಕಾರರತ್ನ ಪ್ರಶಸ್ತಿ ಪುರಸ್ಕೃತಎಸ್.ಆರ್. ಲಕ್ಷಿö್ಮÃಕಾಂತರೆಡ್ಡಿಅವರನ್ನು ಆಡಳಿತ ಮಂಡಳಿ ಹಾಗೂ ಸದಸ್ಯರೆಲ್ಲರ ಪರವಾಗಿ ಸನ್ಮಾನಿಸಲಾಯಿತು. ಲಕ್ಷಿö್ಮÃಕಾಂತರೆಡ್ಡಿಅವರು ಬ್ಯಾಂಕಿಗೆ ಸಲ್ಲಿಸಿರುವ ಸೇವೆ ಹಾಗೂ ಸಾಧನೆಯ ಸಂಕ್ಷಿಪ್ತ ಪರಿಚಯವನ್ನು ಬ್ಯಾಂಕಿನ ನಿರ್ದೇಶಕ ಶ. ಮಂಜುನಾಥ ವಾಚನ ಮಾಡಿದರು.
ಬ್ಯಾಂಕಿನ ನಿರ್ದೇಶಕ ಪಿ.ಎಲ್. ಸುರೇಶ್‌ರಾಜು ಸ್ವಾಗತಿಸಿದರು. ಬ್ಯಾಂಕಿನಉಪಾಧ್ಯಕ್ಷಎಲ್.ಈ. ಶ್ರೀನಿವಾಸ್ ಬಾಬು ಲಿಂಗಂ ಮಾಜಿ ಸಚಿವ ಡಿ. ಸುಧಾಕರ್, ವಿಶ್ರಾಂತ ಪತ್ರಕರ್ತಜಿ.ಎಸ್. ಉಜ್ಜನಪ್ಪ ಸೇರಿದಂತೆ ಕಳೆದ ಸಾಲಿನಲ್ಲಿ ಸ್ವರ್ಗಸ್ಥರಾದ ಸದಸ್ಯರ ಹೆಸರು ವಾಚನ ಮಾಡುವ ಮೂಲಕ ಒಂದು ನಿಮಿಷ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಸದಸ್ಯರು, ಸದಸ್ಯರ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರ ಎಸ್.ಎಸ್.ಎಲ್.ಸಿ., ಪಿ.ಯು.ಸಿ.ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿಉತ್ತೀರ್ಣರಾಗಿರುವ ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು.

































