ಮಾದಾರ ಚನ್ನಯ್ಯ ಶ್ರೀಗಳು ವಾಸುದೇವ ಸದ್ಗುರು ಶ್ರೀಗಳ ಜೊತೆ ಕಾರನಲ್ಲಿ ಒಂದು ಸುತ್ತು.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ : ಈಶಾ ಫೌಂಡೇಶನ್ನ ಜಗ್ಗಿ ಸದ್ಗುರು ಶ್ರೀಗಳನ್ನ ಕಾರಿನಲ್ಲಿ ಕೂರಿಸಿಕೊಂಡ ಮಾದಾರ ಚನ್ನಯ್ಯ ಶ್ರೀಗಳು ಖುದ್ದು ಕಾರು ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಈಶಾ ಫೌಂಡೇಶನ್ನ ಸಂಸ್ಥಾಪಕರಾದ ಜಗ್ಗಿ ವಾಸುದೇವ ಸದ್ಗುರು ಶ್ರೀಗಳು ಉಪನ್ಯಾಸ ಕಾರ್ಯಕ್ರಮ ನಿಮಿತ್ತ ಮಾದಾರ ಚನ್ನಯ್ಯ ಗುರುಪೀಠಕ್ಕೆ ಆಗಮಿಸಿದ್ದು ಕಾರ್ಯಕ್ರಮ ಮುಗಿದ ಬಳಿಕ ಮುಂದಿನ ಕಾರ್ಯಕ್ರಮಕ್ಕೆ ಕೊಪ್ಪಳಕ್ಕೆ ತೆರಳಬೇಕಿದ್ದು ಹೆಲಿಪ್ಯಾಡ್ಗೆ ತೆರಳಲು ಸದ್ಗುರು ಶ್ರೀಗಳು ಸಿದ್ದರಾಗಿದ್ದರು. ಈ ವೇಳೆ ಇನ್ನೋವಾ ಕಾರು ಹತ್ತಿ ಕೂತ ಸದ್ಗುರು ಶ್ರೀಗಳನ್ನು ಖುದ್ದು ಹೆಲಿಪ್ಯಾಡ್ಗೆ ಬಿಡಲು ಮಾದಾರ ಗುರುಪೀಠದ ಬಸವ ಮಾದಾರ ಚನ್ನಯ್ಯ ಶ್ರೀಗಳು ಹೊರಟಿದ್ದು ವಿಶೇಷವಾಗಿತ್ತು.

ಇನ್ನೋವಾ ಕಾರು ಚಾಲಕನ ಜಾಗದಲ್ಲಿ ಕೂತು ಸ್ಟೇರಿಂಗ್ ಹಿಡಿದು ಖುದ್ದು ತಾವೆ ಕಾರು ಚಲಾಯಿಸಿದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಡ್ರೈವಿಂಗ್ ಮಾಡಿ ಹೆಲಿಪ್ಯಾಡ್ನವರೆಗೆ ಕಾರು ಚಲಾಯಿಸಿ ಕೊಂಡು ಹೋಗಿ ಎಲ್ಲರ ಗಮನ ಸೆಳೆದಿದ್ದು ಹೆಲಿಪ್ಯಾಡ್ನವರೆಗೆ ಡ್ರೈವಿಂಗ್ ಮಾಡಿ ಸದ್ಗುರು ಶ್ರೀಗಳನ್ನ ಬೀಳ್ಕೊಟ್ಟು ಬಂದಿದ್ದು ಡ್ರೈವಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮುರುಘಾ ಮಠದ ಹೆಲಿಪ್ಯಾಡ್ಗೆ ಬಂದಿಳಿದ ಸದ್ಗುರು ಶ್ರೀಗಳಿಗೆ ಮಾದಾರ ಚನ್ನಯ್ಯ ಶ್ರೀಗಳಿಂದ ಮಾದಾರ  ಗುರುಪೀಠದಲ್ಲಿ ಅದ್ದೂರಿ ಸ್ವಾಗತ ಮಾಡಿದರೆ ಮಾದಾರ ಚನ್ನಯ್ಯ ಶ್ರೀಮಠದ ಕೈತೋಟವನ್ನು ಸದ್ಗುರು ಶ್ರೀಗಳು ವೀಕ್ಷಿಸಿದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon