ಅಡಿಕೆ: ರೈತ ಸಂಘ ಆಧಾರ ರಹಿತವಾದ ಆರೋಪ: ಕಾರೇಹಳ್ಳಿ ಉಲ್ಲಾಸ್.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ರೈತ ಸಂಘ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದೆ ಆದರೆ ಇದಕ್ಕೆ ಯಾವುದೇ ರೀತಿಯ ಸಾಕ್ಷಿ ಇಲ್ಲವಾಗಿದೆ, ಇವು ಆಧಾರ ರಹಿತವಾದ ಆರೋಪಗಳಾಗಿವೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದಲ್ಲಿ ಗುರುವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೂ26 ರಂದು ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಸವರಾಜಪ್ಪರವರು ನನ್ನ ಮೇಲೆ ಇಲ್ಲ-ಸಲ್ಲದೆ ಆರೋಪಗಳನ್ನು ಮಾಡಿದ್ಧಾರೆ, ಇದಕ್ಕೂ ನನಗೂ ಸಂಬಂಧ ಇಲ್ಲವಾಗಿದೆ, ಆದರೂ ಸಹಾ ಇದರ ಮದ್ಯದಲ್ಲಿ ನನ್ನನ್ನು ಎಳೆಯಲಾಗಿದೆ, ಚಿತ್ರದುರ್ಗ ಜಿಲ್ಲೆಗೆ ಕೆಲವು ಅಡಿಕೆ ವರ್ತಕರು ಇಂಡೋನೇಷಿಯಾ, ಬರ್ಮ ಹಾಗೂ ವಿಜೋರಾಂನಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ತರಿಸಿಕೊಂಡು ಅದರಲ್ಲಿ ವಿಷ ಪೂರಿತವಾದ ರೆಡ್ ಆಕ್ಸೈಡ್ನ್ನು ಮಿಶ್ರಣ ಮಾಡಿ ನಮ್ಮ ಜಿಲ್ಲೆಯ ಗುಣಮಟ್ಟದ ಅಡಿಕೆಯ ಜೊತೆಯಲ್ಲಿ ಬೆರಸಿ ನಮ್ಮ ಸ್ಥಳೀಯ ಆಡಿಕೆ ರೀತಿಯಲ್ಲಿ ತಯಾರು ಮಾಡಿ ಒಂದು ಚೀಲಕ್ಕೆ ಅರ್ಧ ಚೀಲದಷ್ಟು ಬೆರಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಮ್ಮ ಜಿಲ್ಲೆಯಲ್ಲಿನ ಅಡಿಕೆಯ ದರ ಇಳಿಯುತ್ತಿದೆ, ಇದರ ಲಾಭವನ್ನು ಪಡೆಯುವ ಕೆಲ ವರ್ತಕರು ನಮ್ಮ ಅಡಿಕೆಯನ್ನು ಉತ್ತರ ಭಾರತದ ಸುಪಾರಿ ಕಂಪನಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಇದರಿಂದ ನಮ್ಮ ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತಿದೆ ಇದರ ವಿರುದ್ದ ನಾನು ಹೋರಾಟವನ್ನು ಮಾಡುತ್ತೀದ್ದೇನೆ ಹೊರೆತು ರೈತರ ವಿರುದ್ದ ಅಲ್ಲ ಎಂದು ಸ್ಪಷ್ಟಪಡಿಸಿದರು.

ಅಡಿಕೆಗಳನ್ನು ಕೆಲವು ಟ್ರಾನ್ಸ್ ಪೋರ್ಟ ಕಂಪನಿಗಳು ಉತ್ತರ ಭಾರತಕ್ಕೆ ಅಕ್ರಮವಾಗಿ ರಾಜ್ಯ ಮತ್ತು ಕೇಂದ ಸರ್ಕಾರಕ್ಕೆ ಶೇ,5 ಜಿ.ಎಸ್.ಟಿ. ಹಾಗೂ ಶೇ.15 ಎಪಿಎಂಸಿ ತೆರಿಗೆಯನ್ನು ವಂಚಿಸಿ ಸಾಗಾಟ ಮಾಡುತ್ತಿದ್ದಾರೆ. ಜೂ.24ರ ರಾತ್ರಿ ವಿದೇಶಿ ಅಡಿಕೆಯನ್ನು ಮಿಶ್ರಣ ಮಾಡಿ ಸಾಗಾಟ ಮಾಡುತ್ತಿದ್ದ ಲಾರಿಯ ಬಗ್ಗೆ ಮಾಹಿತಿ ಬಂದಾಗ ಅದನ್ನು ತೆರಿಗೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ಅಧಿಕಾರಿಗಳು ಲಾರಿಯ ಬಳಿಗೆ ಬಂದು ದಾಖಲೆಗಳನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ಗೋತ್ತಾಗಿ ಲಾರಿಯನ್ನು ಸೀಜ್ ಮಾಡಿದ್ದಾರೆ. ಇದಾದ ಮೇಲೆ ನನಗೆ ಹಲವಾರು ಕರೆಗಳು ಬಂದು ಜೀವ ಬೆದರಿಕೆಯನ್ನು ಹಾಕಿವೆ, ಇದರ ಬಗ್ಗೆ ಪೋಲಿಸರಿಗೆ ದೂರನ್ನು ಸಹಾ ನೀಡಲಾಗಿದೆ ಎಂದರು.

ಇದಾದ ಮೇಲೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ನನ್ನ ಬಗ್ಗೆ ಆಧಾರ ರಹಿತವಾದ ಸುಳ್ಳು ಪ್ರಕರಣವನ್ನು ದಾಖಲಿಸಿ ಎಫ್.ಐ.ಆರ್ ಮಾಡಿಸಿದ್ದಾರೆ. ಇದರ ಬಗ್ಗೆ ನಾನು ಕರ್ನಾಟಕದ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತರಲಾಗಿದೆ, ನನ್ನ ವಿರುದ್ದ ಸುಳ್ಳು ಪ್ರತಿಭಟನೆಯನ್ನು ಹಾಗೂ ಸುಳ್ಳು ಆರೋಪವನ್ನು ಮಾಡಿದವರ ವಿರುದ್ದ ಕಾನೂನು ಹೋರಾಟವನ್ನು ಮಾಡಲಾಗುವುದು. ಜಿಲ್ಲೆಗೆ ಬರುತ್ತಿರುವ ಅಕ್ರಮ ವಿದೇಶಿ ಅಡಿಕೆಯನ್ನು ನಿಲ್ಲಿಸಿ ನಮ್ಮ ಜಿಲ್ಲೆಯ ರೈತರಿಗೆ ಅನ್ಯಾಯವಾಗುವುದಕ್ಕೆ ಬಿಡುವಿದಿಲ್ಲ ಇದರ ವಿರುದ್ದ ಹೋರಾಟವನ್ನು ಮಾಡುತ್ತೇನೆ ನನ್ನ ಹೋರಾಟದ ಮೇಲೆ ಕರ್ನಾಕ ವಿಧಾನಸಭೆಯ ಅರ್ಜಿಗಳ ಸಮಿತಿಯ ಸಭೆಯಲ್ಲಿ ಇದರ ಬಗ್ಗೆ ಚರ್ಚೆಯಾಗಿದೆ. ಇದರ ಬಗ್ಗೆ ಶೀಘ್ರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಮ್ಮ ಜಿಲ್ಲೆಯಲ್ಲಿ ಆಡಿಕೆ ಬೆಳೆಗಾರರಿಗೆ ಅಗುತ್ತಿರುವ ಅನ್ಯಾಯದ ಬಗ್ಗೆ ಮಾಹಿತಿಯನ್ನು ನೀಡಿ ಇದಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಲಾಗುವುದು ಎಂದರು.ಗೋಷ್ಟಿಯಲ್ಲಿ ಹನೀಫ್ ಉಪಸ್ಥಿತರಿದ್ದರು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon