ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾದ ದೇವಿಕಾ ಪ್ರಿಯದರ್ಶಿನಿ.!

WhatsApp
Telegram
Facebook
Twitter
LinkedIn

ತಿರುವನಂತಪುರಂ: ಒಮ್ಮೆಲೆ ಯುಪಿಎಸ್‌ಸಿಯಲ್ಲಿ ಉತ್ತೀರ್ಣರಾಗುವುದು ಸುಲಭದ ಮಾತಲ್ಲ. ಈ ಪರೀಕ್ಷೆಯನ್ನು ಕೆಲವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಲು ಸಫಲರಾಗುತ್ತಾರೆ. ಅಂತಹ ಅಭ್ಯರ್ಥಿಗಳಲ್ಲಿ ದೇವಿಕಾ ಪ್ರಿಯದರ್ಶಿನಿ ಕೂಡ ಒಬ್ಬರು.

ದೇವಿಕಾ ಅವರು ಚಾತ್ತನ್ನೂರು ಅಂಚೆ ಕಚೇರಿ ಸಮೀಪದ ತಿರುವತಿರಾದ ಮೂಲದವರು. ಅವರು ಇಂಜಿನಿಯರ್ ಜೆ. ಅಯ್ಯಪ್ಪನ್ ಪಿಳ್ಳೈ ಮತ್ತು ಕಡಂಪಟ್ಟುಕೋಣಂ ಪ್ರೌಢಶಾಲೆಯ ಶಿಕ್ಷಕಿ ಪಿ.ಆರ್. ರಾಧಿಕಾ ಪ್ರಿಯದರ್ಶಿನಿ ಅವರ ಪುತ್ರಿ.

ದೇವಿಕಾ ಅವರು ತಿರುವನಂತಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ ನಲ್ಲಿ ರಸಾಯನಶಾಸ್ತ್ರದಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಿದ್ದಾರೆ. ಅವರು ಯುಪಿಎಸ್‌ಸಿ ಪರೀಕ್ಷೆಗೆ ಐಚ್ಛಿಕ ವಿಷಯವಾಗಿ ‘ಮಲಯಾಳಂ ಸಾಹಿತ್ಯ’ವನ್ನು ಆಯ್ಕೆ ಮಾಡಿಕೊಂಡಿದ್ದರು.

2024ರಲ್ಲಿ ದೇವಿಕಾ ಅವರು ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಾರೆ. ಅವರು ತಮ್ಮ ಮೊದಲ ಪ್ರಯತ್ನದಲ್ಲೇ 95ನೇ ಅಖಿಲ ಭಾರತ ರ‍್ಯಾಂಕ್ ಪಡೆದು ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ.

ದೇವಿಕಾ ಅವರ ಪತಿ ಎಂ.ಜೆ. ಅರವಿಂದ್ ಅವರು ಕತಾರ್ ಏರ್‌ವೇಸ್‌ನಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಂಪತಿಗಳು ಪ್ರಸ್ತುತ ತಿರುವನಂತಪುರದ ತಿರುಮಲದ ವಾಳಿಯವಿಳಾದಲ್ಲಿರುವ ಅರವಿಂದ್ ಅವರ ನಿವಾಸದಲ್ಲಿ ನೆಲೆಸಿದ್ದಾರೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon