ಮುಂಬೈ : ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯು ಇದೇ ಜನವರಿ 22 ರಿಂದ ಪ್ರಾರಂಭವಾಗಲಿದೆ.
ಜ.22ರಿಂದ ಫೆಬ್ರವರಿ 2ರ ವರೆಗೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ನಂತರ ಫೆಬ್ರವರಿ 6 ರಿಂದ 12ರ ವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಪ್ರಸಕ್ತ ವರ್ಷದಲ್ಲಿ ಭಾರತ ತಂಡಕ್ಕೆ ಇದು ಮೊದಲ ಅಂತಾರಾಷ್ಟ್ರೀಯ ಟಿ20 ಸರಣಿಯಾಗಿರುತ್ತದೆ.
ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ಗೆ ಬಿಸಿಸಿಐ ನಾಯಕತ್ವದ ಹೊಣೆ ನಿಡಿದೆ. ಹಾಗೂ ಏಕದಿನ ಸರಣಿಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಸದಸ್ಯರ ತಂಡವನ್ನ ಪ್ರಕಟಿಸಲಾಗಿದೆ.
ಟಿ20 ಪಂದ್ಯಗಳು ಪ್ರತಿ ಪಂದ್ಯ ಸಂಜೆ 7:00 ಗಂಟೆಗೆ ಆರಂಭವಾಗಲಿದ್ದು, ಕೋಲ್ಕತ್ತಾ (ಈಡನ್ ಗಾರ್ಡನ್)ನಲ್ಲಿ ಜ.22ರಂದು ಮೊದಲ ಪಂದ್ಯ ನಡೆಯಲಿದೆ. ಬಳಿಕ ಕ್ರಮವಾಗಿ ಚೆನ್ನೈ (ಚೆಪಾಕ್)ನಲ್ಲಿ ಜ.25ಎಂದು 2ನೇ ಪಂದ್ಯ, ರಾಜ್ಕೋಟ್ (ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್)ನಲ್ಲಿ ಜ.28ರಂದು 3ನೇ ಪಂದ್ಯ, ಪುಣೆ (ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್)ಯಲ್ಲಿ ಜ.31ರಂದು 4ನೇ ಪಂದ್ಯ ಮತ್ತು ಮುಂಬೈ (ವಾಂಖೆಡೆ)ಯಲ್ಲಿ ಫೆ.02ರಂದು 5ನೇ ಪಂದ್ಯ ನಡೆಯಲಿದೆ.