LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಅಪ್ರಾಪ್ತ ಬಾಲಕಿಯರಿಗೆ ಯಾರಾದರೂ ಲೈಂಗಿಕ ಕಿರುಕುಳ: ಪೋಕ್ಸೊ ಕಾಯಿದೆಯಡಿ ಶಿಕ್ಷೆ..!

ಅಪ್ರಾಪ್ತ ಬಾಲಕಿಯರಿಗೆ ಯಾರಾದರೂ ಲೈಂಗಿಕ ಕಿರುಕುಳ: ಪೋಕ್ಸೊ ಕಾಯಿದೆಯಡಿ ಶಿಕ್ಷೆ..!

 

ಚಿತ್ರದುರ್ಗ : ಅಪ್ರಾಪ್ತ ಬಾಲಕಿಯರಿಗೆ ಯಾರಾದರೂ ಲೈಂಗಿಕ ಕಿರುಕುಳ ನೀಡಿದರೆ ಪೋಕ್ಸೊ ಕಾಯಿದೆಯಡಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸರಸ್ವತಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಅಭಿನೇತ್ರಿ ಪಟವರ್ಧನ್ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.

ನಗರದ ಪ್ರತಿಷ್ಠಿತ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಪೋಕ್ಸೊ, ಬಾಲ್ಯ ವಿವಾಹ ನಿಷೇಧ ಕಾಯಿದೆ, ಮಕ್ಕಳ ಹಕ್ಕುಗಳು ಮತ್ತು ಸೈಬರ್ ಕ್ರೈಂ ಕುರಿತು  ಪ್ರೌಢಶಾಲಾ ಮಕ್ಕಳಿಗೆ ಶನಿವಾರ ಏರ್ಪಡಿಸಲಾಗಿದ್ದ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೆಲವೊಮ್ಮೆ ಮಕ್ಕಳು ಲೈಂಗಿಕ ಕಿರುಕುಳವನ್ನು ಅನುಭವಿಸುತ್ತಿದ್ದರು ಹೇಳಿಕೊಳ್ಳಲು ಹೆದರುತ್ತಾರೆ. ಪೋಕ್ಸೊ ಕಾಯಿದೆಯಿರುವುದೇ ಮಕ್ಕಳ ರಕ್ಷಣೆಗಾಗಿ. ನ್ಯಾಯಾಲಯದಲ್ಲಿ ನ್ಯಾಯಾಧೀಶರುಗಳು ಕೂಡ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. ಭಯಪಟ್ಟುಕೊಳ್ಳುವ ಅವಶ್ಯಕತೆಯಿಲ್ಲ. ತಮ್ಮ ಪೋಷಕರಿಗಾಗಲಿ, ಗುರುಹಿರಿಯರಿಗಾಗಲಿ, ನಂಬಿಕಸ್ಥರ ಬಳಿಯಾದರೂ ತಮಗಾಗುತ್ತಿರುವ ತೊಂದರೆಯನ್ನು ಹೇಳಿಕೊಳ್ಳುವಂತೆ ಅರಿವು ಮೂಡಿಸಿದರು.

ಪ್ರತಿ ಶಾಲೆಯಲ್ಲಿಯೂ ಲೀಗಲ್ ಸೆಲ್ ಇದ್ದರೆ ಒಳ್ಳೆಯದು ಎಂದು ಸಲಹೆ ನೀಡಿ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂಗಳು ಜಾಸ್ತಿಯಾಗುತ್ತಿದ್ದು, ಅದರ ಬಗ್ಗೆಯೂ ಜಾಗರೂಕರಾಗಿರುವಂತೆ ಮಕ್ಕಳಲ್ಲಿ ಮನವಿ ಮಾಡಿದರು.

ಸರಸ್ವತಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹರ್ಷ ಮಾತನಾಡುತ್ತ ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧ.

ಅದನ್ನು ಬಾಲ್ಯ ವಿವಾಹವೆಂದು ಪರಿಗಣಿಸಲಾಗುವುದು. ಎಷ್ಟೊ ಪೋಷಕರುಗಳು ಬಡತನ ಇನ್ನು ಅನೇಕ ಕಾರಣಗಳನ್ನು ಮುಂದಿಟ್ಟುಕೊಂಡು ಅಪ್ರಾಪ್ತ ಮಕ್ಕಳಿಗೆ ವಿವಾಹ ಮಾಡಿದರೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಹದಿನೆಂಟು ವರ್ಷದೊಳಗಿನವರಿಗೆ ವಿವಾಹ ಮಾಡಬಾರದು ಎಂದು ಹೇಳಿದರು.

ಮಕ್ಕಳ ರಕ್ಷಣೆಗಾಗಿ ಅನೇಕ ಕಾಯಿದೆಗಳು ಜಾರಿಯಲ್ಲಿವೆ. ಹಕ್ಕುಗಳ ಉಲ್ಲಂಘನೆ, ವೈಯಕ್ತಿಕ ಸುರಕ್ಷತೆ, ಯಾವುದೇ ರೀತಿಯ ಲೈಂಗಿಕ ಕಿರುಕುಳವಾದರೆ ಹಿಂಜರಿಕೆಯಿಲ್ಲದೆ ಮನೆಯಲ್ಲಿ ಪೋಷಕರಿಗೆ ಇಲ್ಲವೆ ಗುರುಗಳಿಗೆ ತಿಳಿಸಿದರೆ ಸೂಕ್ತ ರಕ್ಷಣೆ ಒದಗಿಸಲಾಗುವುದೆಂದು ಮಕ್ಕಳಲ್ಲಿ ಪೋಕ್ಸೊ ಕಾಯಿದೆ ಬಗ್ಗೆ ಜಾಗೃತಿ ಮೂಡಿಸಿದರು.

ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ಆಡಳಿತಾಧಿಕಾರಿ ಚಂದ್ರಕಲಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್, ಡೀನ್ ಅನಂತರಾಮು, ಶೈಕ್ಷಣಿಕ

ನಿರ್ದೇಶಕ ಸಂಪತ್ಕುಮಾರ್, ಪ್ರಾಂಶುಪಾಲರಾದ ಪಿ.ಬಸವರಾಜಯ್ಯ, ಮುಖ್ಯ ಶಿಕ್ಷಕಿ ಜರೀನಾ, ಪಿ.ಆರ್.ಓ. ರವಿಕುಮಾರ್, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST