LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ರಕ್ತ ದಾನ ಮಾಡಿ, ಆರೋಗ್ಯಕರ ಜೀವನ ಹೊಂದಿ -ಡಾ. ತುಳಸಿ ರಂಗನಾಥ್

ರಕ್ತ ದಾನ ಮಾಡಿ, ಆರೋಗ್ಯಕರ ಜೀವನ ಹೊಂದಿ -ಡಾ. ತುಳಸಿ ರಂಗನಾಥ್

 

ಚಿತ್ರದುರ್ಗ: ರಕ್ತ ದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಯುವುದರ ಜೊತೆಗೆ ದಾನಿಗಳ ಆರೋಗ್ಯಕ್ಕೂ ಹಲವು ರೀತಿಯ ಅನುಕೂಲಗಳಿವೆ. ಹೀಗಾಗಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಜಿಲ್ಲಾ ರಕ್ತ ಸುರಕ್ಷತಾ ಅಧಿಕಾರಿ ಡಾ. ತುಳಸಿ ರಂಗನಾಥ್ ಹೇಳಿದರು.

ನಗರದ ಎಸ್.ಜೆ.ಎಂ.ಐ.ಟಿ. ಕಾಲೇಜಿನಲ್ಲಿ ಈಚೆಗೆ ಆಯೋಜಿಸಲಾಗಿದ್ದ ‘ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

18 ವರ್ಷ ತುಂಬಿದ, ಕನಿಷ್ಠ 45 ಕೆ.ಜಿ. ತೂಕ ಹಾಗೂ 12.5ಕ್ಕೂ ಹೆಚ್ಚು ಹಿಮೋಗ್ಲೋಬಿನ್ ಪ್ರಮಾಣ ಹೊಂದಿರುವ ಯಾವುದೇ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ತೊಂದರೆಗಳು ದೂರವಾಗುತ್ತವೆ. ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುವುದಲ್ಲದೆ, ಅನಾವಶ್ಯಕ ಕಬ್ಬಿಣಾಂಶ ಹಾಗೂ ಕ್ಯಾಲೋರಿಗಳು ಕಡಿಮೆಯಾಗಿ ದೇಹಕ್ಕೆ ಹೊಸ ಚೈತನ್ಯ ಸಿಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಜೀವ ಉಳಿಸಿದ ಆತ್ಮತೃಪ್ತಿ ದೊರೆಯುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿ ಮಾದರಿಯಾಗಿರುವ ಆನಂದ್ ಹಾಗೂ ಕೋರ ಪವನ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ರಕ್ತದಾನಿಗಳು ತಮ್ಮ ಅನುಭವ ಹಾಗೂ ರಕ್ತದಾನದಿಂದ ದೊರೆತ ಆರೋಗ್ಯ ಪ್ರಯೋಜನಗಳ ಹಂಚಿಕೊಂಡರು.

ಇದೇ ವೇಳೆ ಹೆಚ್‍ಐವಿ/ಏಡ್ಸ್ ಕುರಿತು ಮಾತನಾಡಿದ ಜಿಲ್ಲಾ ಮೇಲ್ವಿಚಾರಕ ಅಶೋಕ್, ಯುವಜನತೆ ಸುರಕ್ಷಿತ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಹೆಚ್‍ಐವಿ ಜಾಗೃತಿ ಮಾಹಿತಿ ಸುಲಭವಾಗಿ ದೊರೆಯುವಂತೆ ಮಾಡಲು ಕ್ಯೂಆರ್ ಕೋಡ್ ಪೋಸ್ಟರ್‍ಗಳನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ. ಸಂಚಾಲಕರಾದ ವಿ.ಅನುಷಾ, ಎನ್.ಎಸ್.ಎಸ್. ಸಂಚಾಲಕ ನಿರಂಜನ್ ಹಾಗೂ ಡ್ಯಾಪ್ಕೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಿನದ ಮಂಡಕ್ಕಿ ಒಗ್ಗಣೆ ಮಿರ್ಚಿ 04-10-2026ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ.!ನವೋದಯ ವಿದ್ಯಾಲಯ ಪ್ರವೇಶ: ಅರ್ಜಿ ಸಲ್ಲಿಕೆ ಅ.15 ರವರೆಗೆ ವಿಸ್ತರಣೆರಕ್ತ ದಾನ ಮಾಡಿ, ಆರೋಗ್ಯಕರ ಜೀವನ ಹೊಂದಿ -ಡಾ. ತುಳಸಿ ರಂಗನಾಥ್ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಪ್ರೋತ್ಸಾಹಧನ ಹಾಗೂ ವಸತಿನಿಲಯ ಪ್ರವೇಶ: ಆನ್‌ಲೈನ್ ಅರ್ಜಿ ಆಹ್ವಾನನಾಳೆ ಅ.4 ರಂದು ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಪ್ರವಾಸಈ ಶಕ್ತಿಶಾಲಿ ಪ್ರತ್ಯಂಘದೇವಿ ಶತ್ರುನಾಶಕ ಮಂತ್ರ 108 ಬಾರಿ ಪಠನೆ ಮಾಡಿ ನಿಮ್ಮ ಶತ್ರು ನಿಮ್ಮ ಕಣ್ಣು ಮುಂದೇನೆ.......?ವಚನ: -ಬಸವಲಿಂಗದೇವಸರಳ ಜೀವನಕ್ಕೆ ಅಪರಿಗ್ರಹ ಮಾರ್ಗ ತೋರಿದ ಗಾಂಧಿ: ಜಿಲ್ಲಾಧಿಕಾರಿ ಎಸ್. ರಮ್ಯಾಚೋಳಘಟ್ಟ ಗ್ರಾಮ  ಪಂಚಾಯಿತಿಯಲ್ಲಿ ಸ್ವಚ್ಛತಾ ಶ್ರಮದಾನ