LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.! ನಗದು ರಹಿತ ಸಮಗ್ರ ಆರೋಗ್ಯ ಯೋಜನೆ ಜಾರಿ.!

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.! ನಗದು ರಹಿತ ಸಮಗ್ರ ಆರೋಗ್ಯ ಯೋಜನೆ ಜಾರಿ.!

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು, ಅವರ ಕುಟುಂಬದ ಸದಸ್ಯರು ಹಾಗೂ ಅರ್ಹ ಅವಲಂಬಿತರ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ.

 ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ' (AB-ArK) ಯೋಜನೆಯ ನಿಯಮಾವಳಿಗಳಡಿಯಲ್ಲೇ "ಸಂಪೂರ್ಣ ಶೂನ್ಯ" (Zero Premium) ವಾರ್ಷಿಕ ವಂತಿಕೆ ಆಧಾರಿತ ನಗದು ರಹಿತ ಸಮಗ್ರ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿದೆ.

  ಯೋಜನೆಯಿಂದಾಗಿ ನೌಕರರು ಆಸ್ಪತ್ರೆ ವೆಚ್ಚದ ಚಿಂತೆಯಿಲ್ಲದೆ ಉನ್ನತ ಮಟ್ಟದ ವೈದ್ಯಕೀಯ ಸೇವೆ ಪಡೆಯಲು ಅನುಕೂಲವಾಗಲಿದೆ.

 ಯೋಜನೆಯ ಪ್ರಮುಖ ಮುಖ್ಯಾಂಶಗಳು:

 ಲಕ್ಷಾಂತರ ಜನರಿಗೆ ಪ್ರಯೋಜನ: ಪ್ರಾರಂಭಿಕ ಹಂತದಲ್ಲಿ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 3.11 ಲಕ್ಷ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಅರ್ಹ ಅವಲಂಬಿತರು ಸೇರಿದಂತೆ ಒಟ್ಟು ಸುಮಾರು 4.93 ಲಕ್ಷ ಫಲಾನುಭವಿಗಳು ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.

 ವಾರ್ಷಿಕ ₹5 ಲಕ್ಷದವರೆಗೆ ವೈದ್ಯಕೀಯ ಕವರ್: ಯೋಜನೆಯು ನಿಗದಿಪಡಿತ ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಯಾಗಿದ್ದು, ಅರ್ಹ ಕುಟುಂಬಕ್ಕೆ ವಾರ್ಷಿಕ ಗರಿಷ್ಠ ₹5.00 ಲಕ್ಷದವರೆಗೆ ಫ್ಲೋಟರ್ ಆಧಾರದ ಮೇಲೆ ದ್ವಿತೀಯ, ತೃತೀಯ ಹಾಗೂ ತುರ್ತು ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಉಚಿತವಾಗಿ ಪಡೆದುಕೊಳ್ಳಲು ಅವಕಾಶ ಕಲ್ಪಿಸುತ್ತದೆ.ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ: ಯೋಜನೆಯಡಿ ಎಬಿ-ಎಆರ್ಕೆ (AB-ArK) ಅಡಿಯಲ್ಲಿ ನೋಂದಾಯಿತ/ಸಂಯೋಜಿತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೌಕರರು ಉಚಿತವಾಗಿ ಚಿಕಿತ್ಸೆ ಪಡೆಯಬಹುದು.

 ವೇತನ/ಪಿಂಚಣಿಯಿಂದ ವಂತಿಕೆ ಕಡಿತ: ಸೇವಾನಿರತ ನೌಕರರ ಮೂಲ ವೇತನದ ಶೇಕಡಾ 1.25 ರಷ್ಟು ಹಾಗೂ ಕುಟುಂಬ ಪಿಂಚಣಿದಾರರ ಮೂಲ ಪಿಂಚಣಿಯ ಶೇಕಡಾ 0.75 ರಷ್ಟು ಮೊತ್ತವನ್ನು ಮಾಸಿಕವಾಗಿ ವಂತಿಕೆಯಾಗಿ ಪಾವತಿಸಿಕೊಳ್ಳಲಾಗುತ್ತದೆ.

 ಆರ್ಥಿಕ ಪಾಲುವಿಕೆ ಮತ್ತು ಸರ್ಕಾರದ ವೆಚ್ಚ:

 

ವಾರ್ಷಿಕ ವೆಚ್ಚದ ಅಂದಾಜು: ಯೋಜನೆಯಡಿ ವಾರ್ಷಿಕವಾಗಿ ಅಂದಾಜು ₹117 ಕೋಟಿ ಮೊತ್ತ ಸಂಗ್ರಹವಾಗುವ ನಿರೀಕ್ಷೆಯಿದ್ದು, ವಾರ್ಷಿಕ ಚಿಕಿತ್ಸಾ ವೆಚ್ಚವು ಸುಮಾರು ₹81.75 ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ.

 

ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು: ಎಬಿ-ಎಆರ್ಕೆ (AB-ArK) ನೀತಿಯನ್ವಯ, ಚಿಕಿತ್ಸಾ ವೆಚ್ಚದ ಶೇಕಡಾ 70 ರಷ್ಟು ಮೊತ್ತವನ್ನು ವಂತಿಕೆಯಿಂದ ಹಾಗೂ ಉಳಿದ ಶೇಕಡಾ 30 ರಷ್ಟು ಮೊತ್ತವನ್ನು ರಾಜ್ಯ ಸರ್ಕಾರವು ಭರಿಸಲಿದೆ. ಇದರಂತೆ ವಾರ್ಷಿಕವಾಗಿ ಅಂದಾಜು ₹57.22 ಕೋಟಿ ವಂತಿಕೆಯಿಂದ ಮತ್ತು ₹24.53 ಕೋಟಿ ರಾಜ್ಯ ಸರ್ಕಾರದ ಪಾಲಿನಿಂದ ಭರಿಸಲ್ಪಡುತ್ತದೆ.

 ಕಾರ್ಪಸ್ ಫಂಡ್ ಸೃಷ್ಟಿ: ಯೋಜನೆಯ ದೀರ್ಘಕಾಲೀನ ಆರ್ಥಿಕ ಸ್ಥಿರತೆ ಮತ್ತು ನಿಧಿಯ ಸಮರ್ಥ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ಕಾರ್ಪಸ್ ಬಡ್ಡೀ ಹಣದಲ್ಲಿ ಶೇಕಡಾ 85 ರಷ್ಟು ಬಡ್ಡಿ ಮೊತ್ತವನ್ನು ಹಾಗೂ 0.05% (5 basis points) ರಾಜ್ಯ ಸರಕಾರದ ಸಾಲದ ಮೇಲಿನ ಬಡ್ಡಿಯನ್ನು ಬಳಸಲು ಅನುಮತಿ ನೀಡಲಾಗಿದೆ.

 ಅನುಷ್ಠಾನ ಮತ್ತು ನಿರ್ವಹಣೆ:

  "ಸಂಪೂರ್ಣ ಶೂನ್ಯ" ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಜಾರಿಗೊಳಿಸಲಾಗುತ್ತದೆ. ಫಲಾನುಭವಿಗಳ ನೋಂದಣಿ, ಮೊತ್ತ ಸಂಗ್ರಹಣೆ, ಚಿಕಿತ್ಸೆಗಳ ಪೂರ್ವ ಅನುಮೋದನೆ (Pre-authorization), ತುರ್ತು ಚಿಕಿತ್ಸೆ, ಕ್ಲೈಮ್ ನಿರ್ವಹಣೆ ಹಾಗೂ ಯೋಜನೆಗಳ ಮೇಲ್ವಿಚಾರಣೆಯನ್ನು ಎಬಿ-ಎಆರ್ಕೆ ಚೌಕಟ್ಟಿನೊಂದಿಗೆ ಸಂಯೋಜಿಸಿ ನಿರ್ವಹಿಸಲಾಗುತ್ತದೆ.

 ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ಗುಣಮಟ್ಟದ, ಕಷ್ಟರಹಿತ ಹಾಗೂ ನಗದುರಹಿತ ಆರೋಗ್ಯ ಸೇವೆಯನ್ನು ಖಾತರಿಪಡಿಸುವ ಜತೆಗೆ, ತುರ್ತು ಆರೋಗ್ಯ ವೆಚ್ಚಗಳಿಂದ ಉಂಟಾಗಬಹುದಾದ ಆರ್ಥಿಕ ಸಂಕಷ್ಟದಿಂದ ರಕ್ಷಣೆ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST