LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಗುರು-ಶಿಷ್ಯ ಭಾಂದವ್ಯ ಸುಖಿ ಸಮಾಜದ ಹೆಗ್ಗುರುತು: ಎನ್.ಎಂ ರಮೇಶ್

ಗುರು-ಶಿಷ್ಯ ಭಾಂದವ್ಯ ಸುಖಿ ಸಮಾಜದ ಹೆಗ್ಗುರುತು: ಎನ್.ಎಂ ರಮೇಶ್

ಚಿತ್ರದುರ್ಗ: ಗುರು-ಶಿಷ್ಯ ಭಾಂದವ್ಯ ಸುಖಿ ಸಮಾಜದ ಹೆಗ್ಗುರುತಾಗಿರಲು ಗುರು ಶಿಷ್ಯರು ಶ್ರಮಿಸಬೇಕೆಂದು ನಿವೃತ್ತ ಉಪನಿರ್ದೇಶಕರಾದ  ಎನ್.ಎಂ ರಮೇಶ್ ಅವರು ಹೇಳಿದರು.

ಅವರು ಚಳ್ಳಕೆರೆ ತಾಲ್ಲೂಕಿನ ನಲಗೇತನ ಹಟ್ಟಿಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಹಳೆಯವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿಕೊಂಡು ನಡೆಸಿದ ಈ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು. ಈ ಗ್ರಾಮದ ಶಾಲೆಯಲ್ಲಿ ಓದಿದವರು ಸೇರಿಕೊಂಡು ಇಂತಹ ಕಾರ್ಯಕ್ರಮ ಅಪರೂಪವಾಗಿದೆ.

ಇದೇ ಸಂದರ್ಭದಲ್ಲಿ ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಸಿ.ಎಲ್. ಪಾಲಾಕ್ಷ ಅವರು ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತ ರಾದ ಹುರುಳಿ ಬಸವರಾಜ್ ಅವರ ಬರೆದ ಸಜ್ಜನರಾಗೋಣ ಎಂಬ ಕೃತಿ ಹಾಗೂ ಇದೇ ಶಾಲೆಯ ಹಳೇ ವಿದ್ಯಾರ್ಥಿ ಕೆ.ಎಂ. ಸಾರಥಿ ಸುರೇಶ್ ಬರೆದ ಪ್ರೇಮ ಕೋಟೆಗೆ ಎರಗಿತು ಪ್ರಳಯ ಎಂಬ ನಾಟಕದ ಕೃತಿಯನ್ನು ಬಿಡುಗಡೆಗೊಳಿಸಿದರು. ಒಂದೇ ವೇದಿಕೆಯಲ್ಲಿ ಗುರು-ಶಿಷ್ಯರು ಬರೆದ ಕೃತಿಗಳನ್ನು ಬಿಡುಗಡೆ ಮಾಡಿದ್ದು ಒಂದು ವಿಶೇಷವಾದ ಪ್ರಸಂಗ ಎಂದು ಬಣ್ಣಸಿದರು. ಗುರುವಂದನಾ ಕಾರ್ಯಕ್ರಮದಲ್ಲಿ 30 ಮಂದಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರನ್ನು ಗೌರವಿಸಲಾಯಿತು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪಾಲಮ್ಮ ಪೂರ್ಣ ಓಬಯ್ಯ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯ ನಿವೃತ್ತ ಶಿಕ್ಷಕರಾದ ಸೀತಾರಾಮಯ್ಯ, ನರಸನಗೌಡ್ರು, ತಿಪ್ಪೇಸ್ವಾಮಿ , ವೆಂಕಟೇಶ ರೆಡ್ಡಿ, ಚಿನ್ಮಯ ರೆಡ್ಡಿ ಬಿ.ವಿ.ನಾಥ್ ಮುಂತಾದವರು ಇದ್ದರು. ಪ್ರಾರ್ಥನೆ ಮಹಾಲಕ್ಷ್ಮಿ ಸ್ವಾಗತ ಪುರಂದರ ನಿರೂಪಣೆ ರಾಮಕೃಷ್ಣ ವಂದನಾರ್ಪಣೆ ಪಿ.ಎನ್. ಮುತ್ತಯ್ಯ ನೆರವೇರಿಸಿದರು.

 

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗುರು-ಶಿಷ್ಯ ಭಾಂದವ್ಯ ಸುಖಿ ಸಮಾಜದ ಹೆಗ್ಗುರುತು: ಎನ್.ಎಂ ರಮೇಶ್ಪ್ರೀತಿ-ಪ್ರೇಮ ವಿಚಾರದಲ್ಲಿ ಜಯ ಸಿದ್ಧಿ ಆಗಬೇಕಾದರೆ ಇದೊಂದು ತಂತ್ರ ಮಾಡಿಗೃಹಲಕ್ಷ್ಮಿ ಹಣ ಪಡೆಯುವ ಮಹಿಳೆಯರು ಓದ ಬೇಕಾದ ಸುದ್ದಿ.!ಹೈಕೋರ್ಟ್‌ನಿಂದ ಮಹತ್ವದ ಆದೇಶ: ಸಾಲದ ಹಣ ಬಾಕಿ ಇದೆ ಎಂಬ ಕಾರಣಕ್ಕೆ ಗ್ರಾಹಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತಿಲ್ಲ..!ದಾವಣಗೆರೆ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ: ತೀವ್ರ ಮಳೆ  ಕೊರತೆ,  ಬೇಳೆ ಹಾನಿ ನಿಖರ ಅಂಶಗಳ ಮಾಹಿತಿ.!ವಿವಿಧ ಹೋಟೆಲ್, ಜ್ಯೂಸ್ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ದಾಳಿ..!ಕೇಂದ್ರ ಬರ ಅಧ್ಯಯನ ತಂಡ ಭೇಟಿ : ಭೀಕರ ಕ್ಷಾಮದ ದರ್ಶನ..!ವಚನ: -ಷಣ್ಮುಖಸ್ವಾಮಿದಿನದ ಮಂಡಕ್ಕಿ ಒಗ್ಗಣೆ ಮಿರ್ಚಿ 04-10-2026ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ.!