ದಾವಣಗೆರೆ,: ಆನಗೋಡು ಶಾಖಾ ವ್ಯಾಪ್ತಿಯ ಮೆಳ್ಳೇಕಟ್ಟೆ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-7 ಕಂದನಕೋವಿ ಎನ್.ಜೆ.ವೈ ಮತ್ತು ಎಫ್-8 ಮೆಳ್ಳೇಕಟ್ಟೆ ಎನ್.ಜೆ.ವೈ ವಿದ್ಯುತ್ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ನವೆಂಬರ್ 17 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕರೆಂಟ್ ಇರಲ್ಲ.!
ಜಮ್ಮಾಪುರ, ಕಂದನಕೋವಿ, ಪವಾಡರಂಗವ್ವನಹಳ್ಳಿ, ಶಿವಪುರ, ಮುಡೇನಹಳ್ಳಿ, ರುದ್ರನಕಟ್ಟೆ, ಶಾಸ್ತ್ರಿಹಳ್ಳಿ, ತುಂಬಿಗೆರೆ, ಲಿಂಗಾಪುರ, ಅಗಸನಕಟ್ಟೆ, ಸಿದ್ದನೂರು, ಸಿದ್ದನೂರು ಲಂಬಾಣಿಹಟ್ಟಿ, ಮೆಳ್ಳೇಕಟ್ಟೆ, ಅಣಜಿ, ಗೊಲ್ಲರಹಳ್ಳಿ, ಗಾಂಧಿನಗರ, ಹುಲಿಕಟ್ಟೆ, ಕಿತ್ತೂರು, ಹೆಮ್ಮನಬೇತೂರು, ಕುರುಡಿ, ದ್ಯಾಮೇನಹಳ್ಳಿ, ಚಿಕ್ಕವ್ವನಾಗತಿಹಳ್ಳಿ, ಕೆರೆಯಾಗಳಹಳ್ಳಿ, ಗಿರಿಯಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಆದುದರಿಂದ ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಆನಗೋಡು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ತಿಳಿಸಿದ್ದಾರೆ.