ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನ 11 ಶಾಸಕರು ಅಡ್ಡಮತದಾನ ಮಾಡಿದ್ದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಅಡ್ಡಮತದಾನ ಮಾಡಿದವರನ್ನು ಸುಮ್ಮನೇ ಬಿಡುವುದಿಲ್ಲ ಎಂದಿದ್ದಾರೆ. 11 ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಅವರು ಯಾರು ಎಂಬುದನ್ನು ಪತ್ತೆ ಹಚ್ಚುವುದೇ ಒಂದು ಸವಾಲಾಗಿದೆ ಎಂದರು.
ಯಾರನ್ನೇ ಕೇಳಿದರೂ ನಾವು-ಆಣೆ- ಪ್ರಮಾಣ ಮಾಡುತ್ತೇವೆ ಎನ್ನುತ್ತಿದ್ದಾರೆ. ಅದೇ ನಮಗೂ ಆಶ್ಚರ್ಯವೆನಿಸಿದೆ. ಹಾಗಾಗಿ ಧರ್ಮಸ್ಥಳದಲ್ಲಿ ಪಕ್ಷದ ವೇದಿಕೆಯಲ್ಲಿಯೇ ಅಡ್ಡಮತದಾನ ಮಾಡಿದವರು ಯಾರೆಂಬುದನ್ನು ಪತ್ತೆ ಹಚ್ಚುತ್ತೇವೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸರಿಯಾಗಿ ಬುದ್ಧಿ ಕಲಿಸುತ್ತೇವೆ ಎಂದರು.
ಮೊದಲು ಅಡ್ಡಮತದಾನ ಮಾಡಿದವರು ಯಾರೆಂಬುದು ಪತ್ತೆಯಾಗಬೇಕು. ಪತ್ತೆಯಾದ ಬಳಿಕ ಕೇಂದ್ರದ ನಾಯಕರೊಂದಿಗೆ ಚರ್ಚಿಸುತ್ತೇವೆ. ಅವರಿಗೆ ಸರಿಯಾಗಿ ಪಾಠ ಕಲಿಸುತ್ತೇವೆ. ಯಾರೂ ಯಾವತ್ತೂ ಇಂತಹ ತಪ್ಪು ಮಾಡಬಾರದು. ಅವರು ಈ ಜನ್ಮದಲ್ಲಿ ಚುನಾವನೆಯಲ್ಲಿ ನಿಲ್ಲಬಾರದು ಹಾಗೆ ಮಾಡುತ್ತೇನೆ ಎಂದು ಗುಡುಗಿದರು.

































