ಹಾಸನ: ಬೆಂಗಳೂರು ಮೂಲದ ಯುವಕರ ತಂಡವೊಂದು ಧರ್ಮಸ್ಥಳ ಪ್ರವಾಸಕ್ಕೆ ತೆರಳಿದ್ದು ವಾಪಸ್ಸಾಗುತ್ತಿದ್ದಾಗ ಈಜಾಡಲು ಹಾಸನದ ಗೊರೂರು ಬಳಿಯಿರುವ ಹೇಮಾವತಿ ಜಲಾಶಯದ ಹಿನ್ನೀರಿಗೆ ಇಳಿದಿದ್ದಾಗ ಮೂವರು ಯುವಕರು ನೀರುಪಾಲಾಗಿದ್ದಾರೆ.
ಕಣ್ಣೆದುರೇ ಸ್ನೇಹಿತರು ಮುಳುಗುತ್ತಿದ್ದರೂ ಏನು ಮಾಡಲು ಸಾಧ್ಯವಾಗದೇ ಯುವಕರ ತಂಡ ಅಸಹಾಯಕನಾಗಿ ನೋಡುತ್ತ ನಿಂತಿದ್ದರು. ಈಜು ಬಾರದಿದ್ದರೂ ಯುವಕರು ಜಲಾಶಯಕ್ಕೆ ಇಳಿದ್ದರಿಂದ ಈ ದುರಂತ ಸಂಭವಿಸಿದೆ. ಮೃತರನ್ನು ಮಣಿಕಂಠ(20), ಚರಣ್, 23 ವರ್ಷದ ಮಿಲನ್ ಎಂದು ತಿಳಿದುಬಂದಿದೆ.
































