Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಆನ್ಲೈನ್‌ ಸಾಲದ ಕಿರುಕುಳ – ಇಬ್ಬರು ಮಕ್ಕಳಿಗೆ ವಿಷವುಣಿಸಿ, ದಂಪತಿ ಆತ್ಮಹತ್ಯೆ

0

ಭೋಪಾಲ್: ಮಧ್ಯ ಪ್ರದೇಶದ ಭೋಪಾಲ್‌ ನಲ್ಲಿ ಮಕ್ಕಳಿಗೆ ವಿಷವುಣಿಸಿ ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿರುವುದು ವರದಿಯಾಗಿದೆ.

ನಗರದ ನೀಲ್ಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಿಂದ ಆತ್ಮಹತ್ಯೆ ಪತ್ರ ಮತ್ತು ಸಲ್ಫೇಟ್ ಮಾತ್ರೆಗಳ ಪ್ಯಾಕೆಟ್ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೃತ ದಂಪತಿ ಖಾಸಗಿ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಮಕ್ಕಳು 8 ಮತ್ತು 3 ವರ್ಷ ವಯಸ್ಸಿನವರು ಎಂದು ಎಸ್ಪಿ ಚಂದ್ರಪ್ರಕಾಶ್ ಪಾಂಡೆ ಅವರು ಹೇಳಿದ್ದಾರೆ.

ಲೋನ್‌ ಪಡೆದುಕೊಂಡಿದ್ದ ಅವರು, ಅದನ್ನು ಮರು ಪಾವತಿಸದೇ ಬೇರೆ ದಾರಿಯಿಲ್ಲದೆ ಈ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Leave A Reply

Your email address will not be published.