Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ವಿಶ್ವಕಪ್ ಗೆಲ್ಲದಿದ್ದರೂ ಪರವಾಗಿಲ್ಲ, ಪಾಕ್ ವಿರುದ್ಧ ಮಾತ್ರ ಸೋಲಬೇಡಿ: ಶಿಖರ್ ಧವನ್

0

ನವದೆಹಲಿ: ವಿಶ್ವಕಪ್ ಗೆಲ್ಲಿ ಅಥವಾ ಗೆಲ್ಲದಿರಲಿ, ಪಾಕಿಸ್ತಾನದ ವಿರುದ್ಧ ಮಾತ್ರ ಸೋಲಬೇಡಿ ಎಂದು ಟೀಂ ಇಂಡಿಯಾ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಭಾರತ ತಂಡಕ್ಕೆ ಕಿವಿಮಾತು ಹೇಳಿದ್ದಾರೆ. ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಶಿಖರ್ ಧವನ್ ಅವರು, ಭಾರತ-ಪಾಕಿಸ್ತಾನ ನಡುವಿನ ಪಂದ್ಯವು ಹೈವೋಲ್ಟೆಜ್‌ನಿಂದ ಕೂಡಿರುತ್ತದೆ. ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಮೈದಾನದ ಒಳಗೆ ಹಾಗೂ ಹೊರಗೆ ಪಂದ್ಯವನ್ನು ವೀಕ್ಷಿಸುತ್ತಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತವು ಅಧಿಕ ಗೆಲುವು ದಾಖಲಿಸಿದೆ ಎಂದು ಧವನ್ ತಿಳಿಸಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ 2023 ಭಾರತದಲ್ಲಿ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ. ನವೆಂಬರ್ 19ರಂದು ಫೈನಲ್‌ನೊಂದಿಗೆ ವಿಶ್ವಕಪ್ ಮುಕ್ತಾಯಗೊಳ್ಳಲಿದೆ. ಈ ಬಾರಿಯ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಹಾಟ್ ಫೇವರಿಟ್ ಆಗಿ ಕಣಕ್ಕೆ ಇಳಿಯಲಿದೆ. ಅದಕ್ಕೆ ಮುಖ್ಯ ಕಾರಣ ತವರು ನೆಲದಲ್ಲಿ ಆಡುತ್ತಿರುವುದು. 2011ರಲ್ಲಿ ಭಾರತ ವಿಶ್ವಕಪ್ ಆತಿಥ್ಯ ವಹಿಸಿದಾಗ ಭಾರತ ತಂಡ ಚಾಂಪಿಯನ್ ಆಗಿತ್ತು.

Leave A Reply

Your email address will not be published.