ಚಿತ್ರದುರ್ಗ: 2026-27ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ಪಡೆಯಲು ಆಸಕ್ತ ರೈತ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಜೂನ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ.
ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ದಾಳಿಂಬೆ, ಕಂದು ಬಾಳೆ, ಅಂಗಾಂಶ ಬಾಳೆ, ಡ್ರ್ಯಾಗನ್ ಪ್ರೂಟ್, ಹುಣಸೆ, ನೇರಳೆ ಹಣ್ಣಿನ ಬೆಳಗಳು, ಹೈಬ್ರಿಡ್ ತರಕಾರಿ, ಕಟ್ ಪ್ಲವರ್ಸ್ (ಗುಲಾಬಿ, ಜೆರ್ಬೆರಾ, ಕಾರ್ನೇಷನ್) ಸುಗಂಧರಾಜ ಹೂವುಗಳು, ಬಿಡಿ ಹೂವುಗಳ ಮತ್ತು ಕರಿಮೆಣಸು/ಬಹುವಾರ್ಷಿಕ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಮತ್ತು ಸಣ್ಣ ಪ್ರಮಾಣದ ಅಣಬೆ ಉತ್ಪಾದನಾ ಘಟಕ ಕಾರ್ಯಕ್ರಮ, ಪಕ್ಷಿ ನಿರೋಧಕ ಬಲೆ, ವೈಯಕ್ತಿಕ ನೀರು ಸಂಗ್ರಹಣಾ ಘಟಕ, ಪಾಲಿಹೌಸ್, ಪ್ಲಾಸ್ಟಿಕ್ ಮಲ್ಚಿಂಗ್, ಹೈಡ್ರೊಪೋನಿಕ್ಸ್, ಕಳೆ ನಿಯಂತ್ರಕ ಮ್ಯಾಟ್ (ವೀಡ್ ಮ್ಯಾಟ್), ತರಕಾರಿ ಬೆಳೆಗಳಿಗೆ ಆಧಾರ ನೀಡುವ ವ್ಯವಸ್ಥೆ, ಎರೆಹುಳು ಗೊಬ್ಬರ ಘಟಕ, ಜೇನು ಪೆಟ್ಟಿಗೆ, 20 ಹೆಚ್ಪಿ ವರೆಗಿನ ಟ್ರ್ಯಾಕ್ಟರ್, ಪವರ್ ಟ್ರಿಲ್ಲರ್, ತಳ್ಳುವ ಗಾಡಿ ಹಾಗೂ ಈರುಳ್ಳಿ ಶೇಖರಣ ಘಟಕಗಳಿಗೆ ಸಹಾಯಧನ ಪಡೆಯಲು ಆಸಕ್ತ ಅರ್ಹ ತೋಟಗಾರಿಕೆ ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಜೂನ್ 15ರೊಳಗೆ ನಿಯಮಾನುಸಾರ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ರೈತರು ಆಯಾ ತಾಲ್ಲೂಕಿನ ಸಂಬಂಧಪಟ್ಟ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ/ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
(ಎಐ ಚಿತ್ರ)































