ಬೆಂಗಳೂರು: ರಾಜ್ಯದ ನೂತನ CM DK ಶಿವಕುಮಾರ್ ಹೋರಾಟಗಾರರ ಸಮಸ್ಯೆ ಆಲಿಸಲು & NRI ಗಾಗಿ ಪ್ರತ್ಯೇಕ 2 ಸಚಿವಾಲಯಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ವಿದೇಶದಲ್ಲಿ ನೆಲೆಸಿರುವ ಭಾರತೀಯರು (NRI) ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಅವರಿಗೆ ಕಾನೂನು ಚೌಕಟ್ಟಿನಲ್ಲಿ ನೆರವು ನೀಡಲು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಸಚಿವಾಲಯ ರಚಿಸಲಾಗುವುದು. ಇದು ಹೂಡಿಕೆದಾರರಿಗೆ ಪೂರಕವಾದ ವಾತಾವರಣ ನಿರ್ಮಿಸಲಿದೆ. ಇಲ್ಲಿ ಪ್ರತ್ಯೇಕ ಸೆಕ್ರೆಟರಿ ಇರಲಿದ್ದಾರೆ ಎಂದಿದ್ದಾರೆ
ಪ್ರತಿನಿತ್ಯ ತಮ್ಮ ಹಕ್ಕುಗಳಿಗಾಗಿ ಅನೇಕ ಹೋರಾಟಗಾರರು, ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತವೆ. ಅವರ ಸಮಸ್ಯೆಗಳನ್ನು ಆಲಿಸುವುದು ಸರ್ಕಾರದ ಕರ್ತವ್ಯ. ಹೋರಾಟಗಾರರ ಅಹವಾಲುಗಳನ್ನು ಆಲಿಸಲು ಪ್ರತ್ಯೇಕ ಮಂತ್ರಿ ಹಾಗೂ ಸಚಿವಾಲಯವನ್ನು ಮಾಡಲಿದ್ದೇವೆ ಎಂದು CM ಡಿಕೆ ಶಿವಕುಮಾರ್ ಘೋಷಿಸಿದ್ದಾರೆ.
ವಾರಕ್ಕೊಬ್ಬರು ಸಚಿವರು ಇವರನ್ನು ಭೇಟಿ ಮಾಡಿ ಮಾತನಾಡಲಿದ್ದಾರೆ. ಹೋರಾಟಗಾರರ ನೋವಿಗೆ ಸ್ಪಂದಿಸುವ ಕೆಲಸವನ್ನು ಈ ಸಚಿವಾಲಯ ಮಾಡಲಿದೆ ಎಂದು ಡಿಕೆಶಿ ತಿಳಿಸಿದ್ದಾರೆ.






























