ನಾಳೆ 30 ರಂದು ಚಿಕ್ಕಪ್ಪನಹಳ್ಳಿ ಕೊಟ್ರಸ್ವಾಮಿ ರಥೋತ್ಸವ

 

ಚಿತ್ರದುರ್ಗ-ತಾಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದ ಶ್ರೀಗುರು ಕೊಟ್ರಸ್ವಾಮಿ ರಥೋತ್ಸವ ಏಪ್ರಿಲ್ 30 ರ ಮಂಗಳವಾರ  ಬೆಳಿಗ್ಗೆ 10 ಗಂಟೆಗ ವಿಜೃಂಭಣೆಯಿಂದ ನೆರವೇರಲಿದೆ.

ರಥೋತ್ಸವದ ಬಳಿಕ ಮಧ್ಯಾಹ್ನ 2 ಗಂಟೆಗೆ ಓಕಳಿ, ನಂತರ 3 ಗಂಟೆಗೆ ಸ್ವಾಮಿಯು ಗಂಗಾಪೂಜೆ ನೆರವೇರಿಸಿಕೊಂಡು ಪಲ್ಲಕ್ಕಿ ಉತ್ಸವದೊಂದಿಗೆ ದೇವಸ್ಥಾನಕ್ಕೆ ಮರಳಲಿದೆ.

Advertisement

ರಥೋತ್ಸವದ ಮುನ್ನಾ ದಿನವಾದ ಸೋಮವಾರ ಬೆಳಿಗ್ಗೆ 10 ಗಂಟೆಗೆ ರುದ್ರಾಭಿಷೇಕ, ಇಷ್ಟಲಿಂಗ ಮಹಾಪೂಜೆ 4 ಗಂಟೆಗೆ  ಕೋಣಂದೂರು ಪುರ ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಪಾದಪೂಜೆ ಮತ್ತು ಆಶೀರ್ವಚನ ಇರುತ್ತದೆ. ಸಂಜೆ 7 ಗಂಟೆಗೆ ಗಣಾರಾಧನೆ, ಸಾಮೂಹಿಕ ದಾಸೋಹ ಸೇವೆ ಇರುತ್ತದೆ.

Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement