‘ಪ್ರಜ್ವಲ್ ರೇವಣ್ಣ ಅರೆಸ್ಟ್ ಆಗಲೇಬೇಕು’- ಜೋಶಿ

ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣ ಸಹ ಅರೆಸ್ಟ್ ಆಗಲೇಬೇಕು. ಪ್ರಕರಣದ ತನಿಖೆ ಸೂಕ್ತ ರೀತಿಯಲ್ಲಿ ಆಗಬೇಕು. ಈ ವಿಚಾರದಲ್ಲಿ ನಮ್ಮ ಪಕ್ಷದ ನಿಲವು ಸ್ಪಷ್ಟವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರ ಪೆನ್‍ಡ್ರೈವ್ ಪ್ರಕರಣ ಹಾಗೂ ರೇವಣ್ಣ ಬಂಧನದ ವಿಚಾರ ಪ್ರತಿಕ್ರಿಯಿಸಿ , ವೀಡಿಯೋಗಳನ್ನು ಯಾರು ವೈರಲ್ ಮಾಡಿದ್ದಾರೆ ಎನ್ನುವುದಕ್ಕಿಂತ ಸಾರ್ವಜನಿಕ ಜೀವನದಲ್ಲಿ ಹೇಗೆ ವರ್ತಿಸುತ್ತೇವೆ ಎಂಬುದು ಮುಖ್ಯ ಎಂದರು. ಪ್ರಕರಣದ ತನಿಖೆಯನ್ನು ಎಸ್‍ಐಟಿ ನಡೆಸುತ್ತಿದೆ. ಗಂಭೀರ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ರೇವಣ್ಣ ಬಂಧನವಾಗಿದೆ. ಈ ರೀತಿಯ ಆಗಬಾರದಿತ್ತು. ಹಲವಾರು ಮಹಿಳೆಯರು ದೂರು ಕೊಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ಸಹ ಅರೆಸ್ಟ್ ಆಗಲೇಬೇಕು ಎಂದರು.

ರೇವಣ್ಣರಿಗೆ ಸಾಕಷ್ಟು ವಯಸ್ಸಾಗಿದೆ ಇದು ದುರ್ದೈವ. ಸಾರ್ವಜನಿಕ ಜೀವನದಲ್ಲಿ ಹೇಗೆ ವರ್ತನೆ ಮಾಡುತ್ತೇವೆ ಎಂಬುದು ಬಹಳ ಮುಖ್ಯ. ವೀಡಿಯೋ ರಿಲೀಸ್ ಆಗಿರುವುದು ಬೇಸರದ ವಿಚಾರ. ಈ ರೀತಿಯ ಘಟನೆ ಆಗಬಾರದಿತ್ತು. ವೀಡಿಯೋ ನನ್ನದಲ್ಲಾ ಎಂದರೆ ನಾವು ಎಫ್‍ಎಸ್‍ಎಲ್‍ಗೆ ಕಳುಹಿಸುತ್ತವೆ. ವೀಡಿಯೋ ಯಾರು ರಿಲೀಸ್ ಮಾಡಿದರು ಅನ್ನೋದು ಚರ್ಚೆ ವಿಷಯ ಅಲ್ಲ. ಮಹಿಳೆಯರ ಜೊತೆಗೆ ನಡೆದುಕೊಂಡಿರುವ ರೀತಿ ಸರಿಯಾದುದಲ್ಲ ಎಂದು ಅವರು ಹೇಳಿದ್ದಾರೆ.

Advertisement

 

Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement