ವಿಯೆಟ್ನಾಂ ಟ್ರಿಪ್ ಮೂಲಕ ಮತ್ತೇ ಸುದ್ದಿಯಾದ ರಶ್ಮಿಕಾ -ವಿಜಯ್ ಜೋಡಿ

ಹೈದರಬಾದ್: ಡೇಟಿಂಗ್ ನಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಿಶ್ಚಿತಾರ್ಥ ಫೆಬ್ರವರಿನಲ್ಲಿ ನಡೆಯಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದುತ್ತಿರುವ ಬೆನ್ನಲ್ಲೇ ಇದೀಗ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಒಂದೇ ತರಹದ ಫೋಟೋ ಹಂಚಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಇತ್ತೀಚೆಗೆ ಈ ಜೋಡಿ ವಿಯೆಟ್ನಾಂಗೆ ಜೊತೆಯಾಗಿ ತೆರಳಿತ್ತು ಎನ್ನಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಇಬ್ಬರೂ ಒಂದೇ ಕಡೆ ಇರುವ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದ್ದರಿಂದ ಇಬ್ಬರ ಪ್ರವಾಸದ ಗುಟ್ಟು ಬಯಲಾಗಿದೆ.

ಈ ಫೋಟೋದಲ್ಲಿ ವಿಜಯ್ ದೇವರಕೊಂಡ ಬೀದಿ ಬದಿ ಆಹಾರ ತಿಂದು ನಗೆ ಬೀರಿದರೇ, ಮತ್ತೊಂದೆಡೆ ರಶ್ಮಿಕಾ ಟೋಪಿ ಧರಿಸಿದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನು ಈ ಜೋಡಿಯ ಪೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದು ಫ್ರೀ ಹನಿಮೂನಾ ಎಂದು ಕಾಲೆಳೆದಿದ್ದರೆ.

Advertisement

Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement