ಬೆಂಗಳೂರು: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರವನ್ನು ಹೆಚ್ಚಳ ಮಾಡಿ ಆಘಾತ ನೀಡಿದೆ.
ಇದರ ಬೆನ್ನಲ್ಲೆ ಇದೀಗ, ರಾಜ್ಯದ ಖಾಸಗಿ ಬಸ್ಗಳ ಮಾಲಿಕರು ಕೂಡ ಪ್ರಯಾಣದ ಟಿಕೆಟ್ ದರವನ್ನು ಶೇ.20ರಷ್ಟು ಹೆಚ್ಚಳ ಮಾಡಿದ್ದಾರೆ.
ಇದು ಜನಸಾಮಾನ್ಯರ ನಿತ್ಯ ಜೀವನದ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ. ಸದ್ಯ ಈ ಹೊಸ ದರಗಳು ಮೇ 15ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘವು ಸ್ಪಷ್ಟಪಡಿಸಿದೆ.






























