3,395 ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಕೃತ ಅಧಿಸೂಚನೆ.!

WhatsApp
Telegram
Facebook
Twitter
LinkedIn

 

ಬೆಂಗಳೂರು: ಒಟ್ಟು 3,395 ಪೊಲೀಸ್ ಕಾನ್‌ಸ್ಟೇಬಲ್ (Police Constable) ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಈ ಬಾರಿ ವಿಶೇಷ ಏನೆಂದರೆ, ಇಡೀ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುತ್ತಿದ್ದು, ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

https://www.instagram.com/p/DZNbSx8gRmF/?utm_source=ig_web_copy_link&igsh=NTc4MTIwNjQ2YQ==

ಯಾವ್ಯಾವ ವಿಭಾಗದಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ? ಅರ್ಜಿ ಸಲ್ಲಿಕೆ ಹೇಗೆ? ವಯೋಮಿತಿ ಸಡಿಲಿಕೆ ಏನಿದೆ?

ಹುದ್ದೆಗಳ ಸಂಪೂರ್ಣ ವರ್ಗೀಕರಣ (Vacancy Details)

ಒಟ್ಟು 3,395 ಹುದ್ದೆಗಳನ್ನು ಪುರುಷರು, ಮಹಿಳೆಯರು, ಸೇವಾನಿರತರು ಹಾಗೂ ತೃತೀಯಲಿಂಗಿ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:

ಪುರುಷ ಅಭ್ಯರ್ಥಿಗಳು: 2,266 ಹುದ್ದೆಗಳು

ಮಹಿಳಾ ಅಭ್ಯರ್ಥಿಗಳು: 755 ಹುದ್ದೆಗಳು

ಸೇವಾನಿರತ ಪುರುಷರು (In-Service): 257 ಹುದ್ದೆಗಳು

ಸೇವಾನಿರತ ಮಹಿಳೆಯರು (In-Service): 82 ಹುದ್ದೆಗಳು

ತೃತೀಯಲಿಂಗಿ ಅಭ್ಯರ್ಥಿಗಳು (Transgender): 35 ಹುದ್ದೆಗಳು

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು (Important Dates)ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಿನಾಂಕಗಳ ಕಡೆಗೆ ವಿಶೇಷ ಗಮನ ಹರಿಸುವುದು ಮುಖ್ಯ.

ಅರ್ಜಿ ಸಲ್ಲಿಕೆ ಆರಂಭ: ಜೂನ್ 8 ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 3 ಆನ್‌ಲೈನ್‌ ಮೂಲಕ ಅಪ್ಲೈ ಮಾಡಲು ಕಡೆಯ ದಿನಾಂಕವಾಗಿದೆ.

ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನ: ಜುಲೈ 4 ರೊಳಗೆ ನಿಗದಿತ ಶುಲ್ಕವನ್ನು ಪಾವತಿಸಬೇಕಿರುತ್ತದೆ.

ವಯೋಮಿತಿ ಸಡಿಲಿಕೆ ವಿವರ (Age Limit)ವಿವಿಧ ಕೆಟಗರಿಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

ನೇರ ನೇಮಕಾತಿ ಅಭ್ಯರ್ಥಿಗಳಿಗೆ (Direct Recruitment):ಸಾಮಾನ್ಯ ಅರ್ಹತೆ (GM): ಗರಿಷ್ಠ 33 ವರ್ಷಗಳು

SC/ ST/ ಪ್ರವರ್ಗ-1 ಮತ್ತು 2A, 2B, 3A, 3B: ಗರಿಷ್ಠ 35 ವರ್ಷಗಳು

ಬುಡಕಟ್ಟು (Tribal) ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷಗಳ ವರೆಗೆ ಅವಕಾಶ ನೀಡಲಾಗಿದೆ.

ಸೇವಾನಿರತ (In-Service) ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ:

ಸಾಮಾನ್ಯ ಅರ್ಹತೆ (GM): ಗರಿಷ್ಠ 38 ವರ್ಷಗಳು

SC/ ST/ ಪ್ರವರ್ಗ-1 ಮತ್ತು 2A, 2B, 3A, 3B: ಗರಿಷ್ಠ 40 ವರ್ಷ ವಯೋಮಿತಿ ಇದೆ.

(ಸಾಂದರ್ಭಿಕ ಚಿತ್ರ)

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon