ದೇಶದ ಮೊದಲ ಅಗ್ನಿವೀರ ಹುತಾತ್ಮ: ರಾಹುಲ್‌ ಆರೋಪ ಸುಳ್ಳು ಎಂದ ಸೈನ್ಯ

ನವದೆಹಲಿ: ಸಿಯಾಚಿನ್‌ ಯುದ್ಧ ಭೂಮಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಮೊದಲ ಅಗ್ನಿವೀರ್ ಗವಾಟೆ ಅಕ್ಷಯ್ ಲಕ್ಷ್ಮಣ್ ಭಾಣುವಾರ ಹುತಾತ್ಮರಾಗಿದ್ದು, ಅವರಿಗೆ ಭಾರತೀಯ ಸೇನೆ ಶ್ರದ್ಧಾಂಜಲಿ ಸಲ್ಲಿಸಿದೆ.

ಅಗ್ನಿವೀರ್ ಗವಾಟೆ ಅಕ್ಷಯ್ ಲಕ್ಷ್ಮಣ್ ಸಾವನ್ನಪ್ಪಿದ ಬೆನ್ನಲ್ಲೇ ಅಗ್ನಿವೀರರು ಹುತಾತ್ಮರಾದ ಸಿಗುವ ಹಣಕಾಸಿನ ನೆರವಿನ ಕುರಿತು ವ್ಯಾಪಕ ಚರ್ಚೆಗಳಾಗುತ್ತಿದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಅಗ್ನಿವೀರ್ ನೀತಿಯನ್ನು ಪ್ರಶ್ನಿಸಿದ್ದು, “ಇದು ಭಾರತದ ಕೆಚ್ಚೆದೆಯ ಹೃದಯಗಳಿಗೆ ’ಅವಮಾನ’ ಮಾಡಲು ರೂಪಿಸಲಾದ ಯೋಜನೆ” ಎಂದು ಟೀಕಿಸಿದ್ದಾರೆ.

ಅಗ್ನಿವೀರ್ ಗವಾಟೆ ಅಕ್ಷಯ್ ಲಕ್ಷ್ಮಣ್ ಕುಟುಂಬಕ್ಕೆ ನನ್ನ ಸಂತಾಪಗಳು, “ಒಬ್ಬ ಯುವಕನು ದೇಶಕ್ಕಾಗಿ ಹುತಾತ್ಮನಾದನು – ಆದರೆ ಆತನಿಗೆ ಯಾವುದೇ ಗ್ರಾಚ್ಯುಟಿ ಇಲ್ಲ, ಅವನ ಸೇವೆಗಾಗಿ ಯಾವುದೇ ಮಿಲಿಟರಿ ಸೌಲಭ್ಯಗಳಿಲ್ಲ ಮತ್ತು ಹುತಾತ್ಮನಾದ ಅವನ ಕುಟುಂಬಕ್ಕೆ ಪಿಂಚಣಿ ಇಲ್ಲ. ಅಗ್ನಿವೀರ್ ಭಾರತದ ವೀರರನ್ನು ಅವಮಾನಿಸುವ ಯೋಜನೆಯಾಗಿದೆ” ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ರಾಹುಲ್ ಹೇಳಿದ್ದಾರೆ.

Advertisement

ಅಗ್ನಿವೀರ್ ಗವಟೆ ಅಕ್ಷಯ್ ಲಕ್ಷ್ಮಣ್ ಭಾನುವಾರ ಕಾರಕೋರಂ ಶ್ರೇಣಿಯಲ್ಲಿ ಸುಮಾರು 20,000 ಅಡಿ ಎತ್ತರದಲ್ಲಿರುವ ಸಿಯಾಚಿನ್ ಹಿಮನದಿಯು ವಿಶ್ವದ ಅತಿ ಎತ್ತರದ ಮಿಲಿಟರಿ ವಲಯದಲ್ಲಿ ಕರ್ತವ್ಯದ ನಿರ್ವಹಿಸುತ್ತಿರುವಾಗ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲಿ ಸೈನಿಕರು ಹಿಮಪಾತ ಮತ್ತು ಶೀತ ಗಾಳಿಯೊಂದಿಗೆ ಹೋರಾಡಬೇಕಾಗಿದ್ದು, ಲಕ್ಷ್ಮಣ್ ಸಾವಿನ ನಿಖರ ಮಾಹಿತಿ ತಿಳಿದುಬಂದಿಲ್ಲ.

ರಾಹುಲ್ ಅವರ ಪೋಸ್ಟ್ ಗೆ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ” ಇದೊಂದು ಸಂಪೂರ್ಣ ಬೇಜವಾಬ್ದಾರಿ ಹೇಳಿಕೆ ಎಂದು ತಿರುಗೇಟು ನೀಡಿದ್ದಾರೆ. “ಅಗ್ನಿವೀರ್ ಗಾವಟೆ ಅಕ್ಷಯ್ ಲಕ್ಷ್ಮಣ್ ಅವರು ಸೇವೆಯ ಪ್ರಯಾಣದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆಹೀಗಾಗಿ ಯುದ್ಧದಲ್ಲಿ ಅಪಘಾತಕ್ಕೀಡಾದವರಾಗಿ ವೇತನಕ್ಕೆ ಅವರು ಅರ್ಹರಾಗಿದ್ದಾರೆ. ಆ ಪ್ರಕಾರ, ಲಕ್ಷ್ಮಣ್ ಅವರ ಕುಟುಂಬಿಕರು ರೂ. 48 ಲಕ್ಷ ಕೊಡುಗೆ ರಹಿತ ವಿಮೆ, ರೂ. 44 ಲಕ್ಷದ ಎಕ್ಸ್-ಗ್ರೇಷಿಯಾ, ಅಗ್ನಿವೀರ್ ಕೊಡುಗೆ ನೀಡಿದ ಸೇವಾ ನಿಧಿ (30%), ಸರ್ಕಾರದ ಸಮಾನ ಹೊಂದಾಣಿಕೆಯ ಕೊಡುಗೆ ಮತ್ತು ಅದರ ಮೇಲಿನ ಬಡ್ಡಿಯನ್ನು ಪಡೆಯುತ್ತಾರೆ, “ಮಾಳವಿಯಾ X ನಲ್ಲಿ ಹೇಳಿದ್ದಾರೆ.

ರಾಹುಲ್ ಪೋಸ್ಟ್ ಬಳಿಕ ಭಾರತೀಯ ಸೈನ್ಯದ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ನಿರ್ದೇಶನಾಲಯ ಪ್ರಕಟಿಸಿರುವ ಪೋಸ್ಟ್‌ನಲ್ಲಿ ಲಕ್ಷ್ಮಣ್ ಅವರ ದುಃಖಿತ ಕುಟುಂಬ ಸಂತಾಪ ವ್ಯಕ್ತಪಡಿಸಿದ್ದು ʼʼಸಾಮಾಜಿಕ ಮಾಧ್ಯಮದಲ್ಲಿ ಬಂದಿರುವ ಅಪಪ್ರಚಾರಕ್ಕೆ ಸಂಬಂಧಿಸಿ ಈ ಕುರಿತು ಸ್ಪಷ್ಟಪಡಿಸುವುದು ಮುಖ್ಯವಾಗಿದೆ ಎಂದು ಹೇಳಿದೆ

ಮೃತ ಅಗ್ನಿವೀರರ ಕುಟುಂಬದವರಿಗೆ 48 ರೂ ಲಕ್ಷದ ವಿಮಾ ಹಣದ ಮೊತ್ತ (ಇದಕ್ಕೆ ಪ್ರೀಮಿಯಂ ಕಟ್ಟಬೇಕಿಲ್ಲ), 44 ಲಕ್ಷ ರೂ. ಪರಿಹಾರ, ಅಗ್ನಿವೀರ್‌ನಿಂದ ಸೇವಾ ನಿಧಿ ಕೊಡುಗೆ (30%) ಮತ್ತು ಸರ್ಕಾರದಿಂದ ಇಷ್ಟೇ ಪ್ರಮಾಣದ ಹೊಂದಾಣಿಕೆಯ ಕೊಡುಗೆ, ಸಂಚಿತ ಬಡ್ಡಿಯೊಂದಿಗೆ ಕೊಡಲಾಗುತ್ತಿದೆʼʼ ಎಂದು ಭಾರತೀಯ ಸೇನೆ ತಿಳಿಸಿದೆ.

ಇದು ಸೈನಿಕನ ಮರಣದ ದಿನಾಂಕದಿಂದ ನಾಲ್ಕು ವರ್ಷಗಳು ಪೂರ್ಣಗೊಳ್ಳುವವರೆಗಿನ ಉಳಿದ ಸೇವಾವಧಿಯ ವೇತನವನ್ನು ಸಹ ಒಳಗೊಂಡಿದೆ. ಪ್ರಸ್ತುತ ಪ್ರಕರಣದಲ್ಲಿ ಈ ಮೊತ್ತ 13 ಲಕ್ಷ ರೂ.ಕ್ಕಿಂತ ಹೆಚ್ಚು ಇದೆ. ಇನ್ನು ಸಶಸ್ತ್ರ ಪಡೆಗಳ ಯುದ್ಧ ಅಪಘಾತ ನಿಧಿಯಿಂದ 8 ಲಕ್ಷ ರೂ. ಹೆಚ್ಚುವರಿ ಕೊಡುಗೆಯನ್ನು ಕುಟುಂಬಸ್ಥರಿಗೆ ನೀಡಲಾಗುತ್ತದೆ. ತಕ್ಷಣದ ಪರಿಹಾರವಾಗಿ ಒದಗಿಸಲು ಸೇನಾಯೋಧರ ಪತ್ನಿಯರ ಕಲ್ಯಾಣ ಸಂಘ (AWWA) 30 ಸಾವಿರ ರೂ ಆರ್ಥಿಕ ನೆರವು ನೀಡುತ್ತಿದೆ ಎಂದು ಸೇನೆ ತಿಳಿಸಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement