ಟಿಕೆಟ್ ವಂಚಿತ ಬಿಜೆಪಿ ಮಾಜಿ ಸಚಿವ ಬಿಎಸ್ಪಿಗೆ ಸೇರ್ಪಡೆ

ಭೋಪಾಲ್: ಮಧ್ಯಪ್ರದೇಶದ ಮಾಜಿ ಸಚಿವ ರುಸ್ತಮ್ ಸಿಂಗ್ ಅವರು ಬಿಜೆಪಿ ಜತೆಗಿನ ಹಲವು ವರ್ಷಗಳ ನಂಟು ಕಡಿದುಕೊಂಡು ಬಿಎಸ್ಪಿಗೆ ಸೇರ್ಪಡೆಗೊಂಡಿದ್ದಾರೆ.

ರುಸ್ತಮ್ ಸಿಂಗ್ ಅವರು ಎರಡು ಬಾರಿ ಪ್ರತಿನಿಧಿಸಿದ್ದ ಮೊರೇನಾ ಕ್ಷೇತ್ರದಿಂದ ಟಿಕೆಟ್ ವಂಚಿತರಾದ ಹಿನ್ನೆಲೆಯಲ್ಲಿ ಸಿಂಗ್ ಈ ಕ್ರಮ ಕೈಗೊಂಡಿದ್ದಾರೆ.

ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮಾ ಮಾತನಾಡಿ, ರುಸ್ತಮ್ ಸಿಂಗ್ ಅವರು ನಮ್ಮ ಪಕ್ಷದ ಹಿರಿಯ ಮುಖಂಡರು. ಬಿಜೆಪಿ ಅವರಿಗೆ ದೊಡ್ಡ ಅವಕಾಶಗಳನ್ನು ನೀಡಿದೆ. ಇಷ್ಟಾಗಿಯೂ, ಒಬ್ಬ ವ್ಯಕ್ತಿ ತಾನು ಬೇರೆಡೆ ಅವಕಾಶ ಪಡೆಯಬಲ್ಲೆ ಎಂದು ಭಾವಿಸಿದರೆ ಅದು ಒಳ್ಳೆಯದು ಎಂದಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement